ಕಾರಗೋಡು: ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಖಾತೆ ಸಚಿವೆ ಪ್ರೊ.ಆರ್. ಬಿಂದು ಇಂದು(ಜುಲೈ ೨೫) ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ ೯ಕ್ಕೆ ಮುನ್ನಾಡ್ ಸರ್ಕಾರಿ ಪ್ರೌಢಶಾಲಾ ಪ್ರವೇಶ ದ್ವಾರ ಉದ್ಘಾಟನೆ, ೧೦ಕ್ಕೆ ಕಾಸರಗೋಡು ಎಲ್‌ಬಿಎಸ್ ಇಂಜಿನಿಯರಿAಗ್ ಕಾಲೇಜು ವಿವಿಧ ಯೋಜನೆಗಳ ಹಾಗೂ ವಾಣಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸುವರು.
ಬೆಳಗ್ಗೆ ೧೧ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜು ಭೂವಿಜ್ಞಾನ ವಸ್ತುಸಂಗ್ರಹಾಲಯ ಉದ್ಘಾಟನೆ ಹಾಗೂ ಮೊಬೈಲ್ ಕಿಯೋಸ್ಕ್ ವಿತರಣೆ, ೧೧.೩೦ಕ್ಕೆ ಕಾಸರಗೋಡು ಕಲೆಕ್ಟರೇಟ್ ನಲ್ಲಿ. ಸಹಜೀವನಂ ಸ್ನೇಹ ಗ್ರಾಮ ಸಭೆ ಹಾಗೂ ಎಂಸಿಆರ್‌ಸಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ ೧.೩೦ಕ್ಕೆ ಕಾಞಂಗಾಡ್ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಸಮ್ಮೇಳನ ಸಭಾಂಗಣ ಉದ್ಘಾಟನೆ, ೨.೩೦ಕ್ಕೆ ಕಾಞಂಗಾಡ್ ಟೌನ್ ಹಾಲ್ ಕೇರಳ ವಿಕಲಚೇತನರ ಕ್ಷೇಮಾಭಿವೃದ್ಧಿ ನಿಗಮದಲ್ಲಿ ವೈದ್ಯಕೀಯ ಸಲಕರಣೆ ವಿತರಣೆ, ಸಂಜೆ ೪ಕ್ಕೆ ಎಂಸಿಆರ್‌ಸಿ ಪೆರಿಯಾ ಸಂತ್ರಸ್ತ ಕುಟುಂಬಗಳಿಗೆ ಎಂ.ಸಿ.ಆರ್.ಸಿ. ಜೀವನೋಪಾಯ ಯೋಜನೆಯ ಕೈಮಗ್ಗ ಘಟಕದ ಉದ್ಘಾಟನೆ, ೫ಕ್ಕೆ ಕಾಂಞAಗಾಡ್ ಎಲ್‌ಬಿಎಸ್ ಆನ್‌ಲೈನ್ ಸಬೆ ನಡೆಯುವುದು.