ಪತ್ತನಂತಿಟ್ಟ: ಕರ್ಕಾಟಕ ಮಾಸದ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಗರ್ಭಬಾಗಿಲು ಇಂದು ಸಂಜೆ ತೆರೆಯಲಾಯಿತು.
ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ ಮೋಹನರ್À ಸಮ್ಮುಖದಲ್ಲಿ ಮೇಲ್ಶಾಂತಿ ಮಹೇಶ ನಂಬೂದಿರಿ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸಿದರು.
ಉಪದೇವತೆಗಳ ಗುಡಿಗಳ ಬಾಗಿಲನ್ನೂ ತೆರೆದು ದೀಪ ಬೆಳಗಿಸಿ, ಮಹಾ ಯಜ್ಞಕುಂಡದಲ್ಲಿ ಅಗ್ನಿಸ್ಪರ್ಶ ಮಾಡಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಇಂದು ವಿಶೇಷ ಪೂಜೆ ಇರುವುದಿಲ್ಲ. ನಾಳೆ ಕರ್ಕಾಟಕ 1 ರಂದು ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆಯಲಾಗುವುದು. ನಿತ್ಯ ಅಭಿಷೇಕದ ನಂತರ ತುಪ್ಪದ ಅಭಿಷೇಕ ನಡೆಯಲಿದೆ.
20ರಂದು ರಾತ್ರಿ 10 ಗಂಟೆಗೆ ಗರ್ಭಗೃಹದ ಬಾಗಿಲು ಮುಚ್ಚಲಾಗುವುದು. ಯಾತ್ರಾರ್ಥಿಗಳು ದರ್ಶನಕ್ಕಾಗಿ ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಬೇಕು.