ಕಾಸರಗೋಡು: ಎರಡು ದಿವಸಗಳಿಂದ ತಗ್ಗಿದ್ದ ಮಳೆ ಅಬ್ಬರ ಸೋಮವಾರ ಮತ್ತೆ ಬಿರುಸುಪಡೆದುಕೊಳ್ಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರಂ ಜಿಲ್ಲೆಯಲ್ಲಿ ತಾಸಿಗೆ 40ಕಿ.ಮೀ ವೇಗದ ಗಾಳಿಯಿಂದ ಕೂಡಿದ ಮಳೆಯಾಗಲಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನತೆ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.