ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೋಲ್ವಾರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಡೂರು ಸರ್ಕಾರಿ ಹೈಯರ್ ಸೆಕೆಮಡರಿ ಶಾಲೆಯಲ್ಲಿ ನಡೆಯಿತು.
ಮೂತ್ರ ಶಾಸ್ತ್ರದ ತಜ್ಞ ಡಾ.ಅಭೀಶ್ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ತಾಲೂಕು ಯೋಜನಾಧಿಕಾರಿ ಮುಕೇಶ್, ಕಾರಡ್ಕ ವಲಯ ಅಧ್ಯಕ್ಷ ಸುರೇಶ್ ಯಾದವ್, ಜನಜಾಗೃತಿ ಸದಸ್ಯ ರಾಮಯ್ಯ ರೈ ನಾರಾಯಣ ಮಾಟೆ ಶುಭಹಾರೈಸಿದರು. ಇನ್ನರ್ವಿಲ್ ಕ್ಲಬ್ ಕಾರ್ಯದರ್ಶಿ ವಚನ ಜಯರಾಮ್ ಶಿಬಿರದ ವಿಶೇಷತೆ ಬಗ್ಗೆ ತಿಳಿಸಿದರು. ಸ್ತನ ಸಂಬAಧಿ ತಜ್ಞರಾದ ಡಾ. ಸ್ಮಿತಾ ಎಸ್ ಅವರು ಕ್ಯಾನ್ಸರ್, ಥೈರಾಯಿಡ್ ಬಗ್ಗೆ ಮಾಹಿತಿ ನೀಡಿದರು. ಸಂತೋಷ್ ಕುಮಾರ್ ಗಾಡಿಗುಡ್ಡೆ ಸ್ವಾಗತಿಸಿ, ಮೇಲ್ವಿಚಾರಕ ಸುರೇಶ್ ವಂದಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಬಿಂದಿಯ, ದಿವ್ಯ,ರೇಣುಕ ಮತ್ತು ನವಜೀವನ ಸಮಿತಿ ಸದಸ್ಯರು ಸಹಕಾರ ನೀಡಿದರು.