ಮಂಜೇಶ್ವರ: ವಿವಿಧ ಬೇಡಿಕೆಗಳನ್ನು ಪ್ರಾಮುಖ್ಯವಾಗಿ ಮಂಜೇಶ್ವರ ಅಂಡರ್ ಪಾಸ್ ಅಗತ್ಯತೆ ಮತ್ತು ತಲಪಾಡಿ, ಕಣ್ವತಿರ್ಥ ಸಮುದ್ರ ಕಿನಾರೆಯಲ್ಲಿ ಉಂಟಾಗಿರುವ ಸಮುದ್ರ ಕೊರೆತ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಫಿಶರೀಸ್, ಪಶುಸಂಗೋಪನೆ, ಅಲ್ಪ ಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರಿಗೆ ಮನವಿ ನೀಡಲಾಯಿತು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ, ಆದರ್ಶ ಬಿ ಎಂ, ಯಾದವ ಬಡಾಜೆ, ಲಕ್ಷ್ಮಣ ಕುಚ್ಚಿಕಾಡ್, ಝಕರಿಯ, ಅಹಮ್ಮದ್ ನೈನಾರ್, ರಾಧಾ ಕನಿಲ,ಮೊದಲದವರು ಉಪಸ್ಥಿತರಿದ್ದರು.