ಕೋಝಿಕ್ಕೋಡ್: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಣ್ಣೂರಿನ ಮೂರೂವರೆ ವರ್ಷದ ಬಾಲಕನಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ಪತ್ತೆಯಾಗಿದೆ.
ಪಾಂಡಿಚೇರಿಯಲ್ಲಿ ನಡೆಸಿದ ಪಿಸಿಆರ್ ಪರೀಕ್ಷೆಯಲ್ಲಿ ರೋಗ ದೃಢಪಟ್ಟಿದೆ.
ರೋಗಲಕ್ಷಣಗಳೊಂದಿಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮಗುವನ್ನು ಕಳೆದ ಶನಿವಾರ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸದ್ಯ ವೆಂಟಿಲೇಟರ್‌ನಲ್ಲಿರುವ ಮಗು ಔಷಧಿಗೆ ಸ್ಪಂದಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏತನ್ಮಧ್ಯೆ, ಮತ್ತೊಂದು ಮಗು ಅಮೀಬಿಕ್ ಎನ್ಸೆಫಾಲಿಟಿಸ್ ರೋಗಲಕ್ಷಣಗಳೊಂದಿಗೆ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಕೋಝಿಕ್ಕೋಡ್‌ನ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಗುವಿನ ಪರೀಕ್ಷಾ ಫಲಿತಾಂಶ ಶುಕ್ರವಾರ ಲಭ್ಯವಾಗಲಿದೆ. ಅಮೀಬಿಕ್ ಎನ್ಸೆಫಾಲಿಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹದಿನಾಲ್ಕು ವರ್ಷದ ಅಫ್ನಾನ್ ಕೆಲವು ದಿನಗಳ ಹಿಂದೆ ಕಾಯಿಲೆಯಿಂದ ಚೇತರಿಸಿಕೊಂಡಿರುವನು.
ಅಮೀಬಿಕ್ ಎನ್ಸೆಫಾಲಿಟಿಸ್ ರೋಗನಿರ್ಣಯ ಮಾಡಿದ ವ್ಯಕ್ತಿ ಚೇತರಿಸಿಕೊಳ್ಳುವುದು ದೇಶದಲ್ಲಿ ಅಪರೂಪ. ವಿಶ್ವದಲ್ಲಿ ಕೇವಲ ೧೧ ಮಂದಿ ಮಾತ್ರ ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.