ಕೋಝಿಕ್ಕೋಡ್: ರಾಜ್ಯ ಸಂಸ್ಕೃತ ಅಕಾಡೆಮಿ ಕೌನ್ಸಿಲ್ ಚಟುವಟಿಕೆಗಳನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸುವುದನ್ನು ವಿರೋಧಿಸಿ ಸಂಸ್ಕೃತ ಶಿಕ್ಷಕರ ಒಕ್ಕೂಟವು ಪ್ರತಿಭಟನೆ ನಡೆಸಲು ಮುಂದಾಗಿದೆ. ಸಂಸ್ಕೃತ ವಿಶೇಷ ಅಧಿಕಾರಿ ಹುದ್ದೆಯು ೨೦೨೨ ರ ಜೂನ್ ೧ ರಿಂದ ಖಾಲಿಯಾಗಿದೆ.
ಪಠ್ಯಪುಸ್ತಕ ಮತ್ತು ಶಿಕ್ಷಕರ ತರಬೇತಿ ಚಟುವಟಿಕೆಗಳು ಸಿದ್ಧಗೊಳ್ಳುತ್ತಿರುವಾಗ ಸಂಸ್ಕೃತ ಸಂಶೋಧನಾ ಅಧಿಕಾರಿ ಹುದ್ದೆಯಲ್ಲಿ ನೇಮಕವಾಗಿಲ್ಲ. ಸಂಸ್ಕೃತ ಓದುತ್ತಿರುವ ಎಲ್ ಪಿ (ಕಿರಿಯ ಪ್ರಾಥಮಿಕ) ತರಗತಿಗಳ ಮಕ್ಕಳಿಗೆ ಕಲೋತ್ಸವ ಕೂಡಾ ನಡೆಸಲು ವ್ಯವಸ್ಥೆಗಳಿಲ್ಲ.
ಕೋಝಿಕ್ಕೋಡ್‌ನಲ್ಲಿ ನಡೆದ ಕೆಎಸ್‌ಟಿಎಫ್ ರಾಜ್ಯ ಸಮಿತಿ ಸಭೆಯು ಸಂಸ್ಕೃತ ಭಾಷೆಗೆ ಸರ್ಕಾರದ ಧೋರಣೆಗೆ ಸಂಬAಧಿಸಿದAತೆ ಆಗಸ್ಟ್ ೧೭ ರಂದು ಕೇರಳದ ಎಲ್ಲಾ ಡಿಡಿಇ ಕಚೇರಿಗಳಿಗೆ ಧರಣಿಯನ್ನು ಆಯೋಜಿಸುವುದಾಗಿ ಘೋಷಿಸಿದೆ.
ಈ ಬಗ್ಗೆ ನಡೆದ ಸಮಾಲೋಚನ ಸಭೆಯಲ್ಲಿ ಖಾಸಗಿ ವಲಯದ ರಾಜ್ಯಾಧ್ಯಕ್ಷ ಸಿ.ಪಿ. ಸನಲ್ ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಸುರೇಶ್ ಬಾಬು, ಇಲಾಖೆ ಅಧ್ಯಕ್ಷ ಸಿ. ಸುರೇಶ್ ಕುಮಾರ್, ಡಾ.ಪಿ. ಪದ್ಮನಾಭನ್, ಎಂ.ಡಿ. ದಿಲೀಪ್ ಮಾತನಾಡಿದರು.