ಜೈಪುರ: ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸಂಬಂಧ ರಾಜಸ್ಥಾನ ಸರ್ಕಾರ ವಿಶೇಷ ಶಿಬಿರ ಆಯೋಜಿಸಲಿದೆ ಎಂದು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ.

ರಾಜಸ್ಥಾನದ ವಿಧಾನಸಭೆಯಲ್ಲಿ ಗೃಹ ಸಚಿವರ ಪರವಾಗಿ ಈ ಮಾಹಿತಿ ನೀಡಿರುವ ಅವರು, ವಲಸಿಗರಿಗೆ ತ್ವರಿತವಾಗಿ ಪೌರತ್ವ ನೀಡಲು ರಾಜ್ಯ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ.
2016 ರಿಂದ ಈವರೆಗೆ 2,329 ವಲಸಿಗರಿಗೆ ಭಾರತದ ಪೌರತ್ವ ಕಲ್ಪಿಸಲಾಗಿದೆ. ಸದ್ಯ 1,566 ಅರ್ಜಿಗಳು ಬಾಕಿ ಉಳಿದಿದ್ದು, ಈ ಪೈಕಿ 300 ಅರ್ಜಿದಾರರ ಬಗ್ಗೆ ಗುಪ್ತಚರ ಇಲಾಖೆಯ ವರದಿ ಇನ್ನಷ್ಟೆ ಕೈಸೇರಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.