ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ ಅಧ್ಯಕ್ಷತೆ ವಹಿಸಿದ್ದರು. ಗೀತ ಕೆ, ಶುಭ ಪಿ ವಾರ್ಷಿಕ ವರದಿ ಮಂಡಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಜಯಗಳಿಸಿದ ವಿದ್ಯಾರ್ಥಿಗಳನ್ನು ಸ್ಮರಣಿಕೆ, ನಗದು ಮತ್ತು ಆಕರ್ಷಕ ಬಹುಮಾನ ನೀಡಿ ಗೌರವಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಬಾಬು ಪಿ, ಉಪಾಧ್ಯಕ್ಷರಾಗಿ ದಯಾನಂದ ಪೆರ್ಣೆ, ಸದಸ್ಯರಾಗಿ ರಾಜೇಶ್ ಸೂರಂಬೈಲು, ರಮೇಶ್ ಮುಖಾರಿಗದ್ದೆ, ಅರ್ಪಿತ ಸೂರಂಬೈಲು, ರಾಜಿ ರಾಜೇಶ್, ಮೊಹಮ್ಮದ್ ಕೆ ಬಿ, ಶಿವಾನಂದ ಪೆರ್ಣೆ, ಗೋಪಾಲಕೃಷ್ಣ ನಾರಾಯಣಮಂಗಲ, ಸುಧಾಕರ, ಬಟ್ಯ, ಲೆಕ್ಕ ಪರಿಶೋಧಕರಾಗಿ ವಸಂತ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಆಯಿಷತ್ ಅಸೀದ ಸೀತಾಂಗೋಳಿ, ಸದಸ್ಯರಾಗಿ ತುಳಸಿ ಪೆರ್ಣೆ, ಬಿಂದು, ಭವಾನಿ ಆರಿಕ್ಕಾಡಿ, ವಾಣಿಶ್ರೀ ಸೂರಂಬೈಲು, ಆಯಿಶ, ಮಂಜೂಷ ಆಯ್ಕೆಯಾದರು. ಮುಖ್ಯ ಶಿಕ್ಷಕಿ ಸುನೀತ ಎ ಸ್ವಾಗತಿಸಿ ಶಾಲಾ ನೌಕರರ ಸಂಘದ ಕಾರ್ಯದರ್ಶಿ ಕಿರಣ್ ಕೆ ವಂದಿಸಿದರು. ಅಬ್ದುಲ್ ಕರೀಂ ಡಿಕೆ ನಿರೂಪಿಸಿದರು. ಪ್ರಶಾಂತ್ ಮುಖಾರಿಗದ್ದೆ, ಸೌಮ್ಯ ಶೆಟ್ಟಿ, ವಿಶಾಲಾಕ್ಷಿ ನಾರಾಯಣಮಂಗಲ, ರವಿಕುಮಾರ್ ಮುಜುಂಗಾವು ಉಪಸ್ಥಿತರಿದ್ದರು.