ಮಂಜೇಶ್ವರ :ಹಾಡ ಹಗಲೇ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ :ಹಾಡ ಹಗಲೇ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗಂಜಿಮಠದ ಸಫ್ವಾನ್ ( 20), ಮಂಜೇಶ್ವರದ ಮುಹಮ್ಮದ್ ಶಿಹಾಬ್ ( 20) ಮತ್ತು ಗಂಜಿಮಠದ ಮುಹಮ್ಮದ್ ಅರ್ಫಾಝ್ (19) ಬಂಧಿತರು.
ಮಂಗಳೂರು ಅಲ್ಲದೆ ಕಾಸರಗೋಡು , ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಪ್ರಕರಣಗಳಲ್ಲಿ ಇವರು ಶಾಮೀಲಾಗಿದ್ದಾರೆ.
ಕಳೆದ ಜೂನ್ ನಾಲ್ಕರಂದು ಬೇಕೂರು ಸುಭಾಶ್ ನಗರದ ಆಯಿಷಾ ಯೂಸುಫ್ ಅವರ ಮನೆಯಲ್ಲಿ ಕಳವು ನಡೆದಿತ್ತು. ಐಫೋನ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಕಳವು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕದ ಅಶ್ರಫ್ ಅಲಿ (25) ಎಂಬಾತನನ್ನು ಬಂಧಿಸಲಾಗಿತ್ತು. ಈತನಿಂದ ಇತರ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿತ್ತು