ಎರ್ನಾಕುಳಂ: ಮಲಬಾರ್‌ನಲ್ಲಿನ ಪ್ಲಸ್ ಒನ್ ಸೀಟು ಬಿಕ್ಕಟ್ಟಿನ ಕುರಿತು ಅಂಕಿಅAಶಗಳನ್ನು ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಸೀಟುಗಳ ಕೊರತೆಯನ್ನು ಪ್ರಶ್ನಿಸಿ ಮಲಬಾರ್ ಎಜುಕೇಶನ್ ಮೂವ್ ಮೆಂಟ್ ಎಂಬ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ.
ಮಲಬಾರ್ ಪ್ರದೇಶದಲ್ಲಿ ಹೊಸ ಹೈಯರ್ ಸೆಕೆಂಡರಿ ಶಾಲೆಗಳು ಮತ್ತು ಹೆಚ್ಚುವರಿ ಬ್ಯಾಚ್‌ಗಳಿಗೆ ಒತ್ತಾಯಿಸಿ ಪಿಐಎಲ್ ಸಲ್ಲಿಸಲಾಗಿದೆ. ಮುಂದಿನ ತಿಂಗಳ ೧ರಂದು ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದೆ.
ಪ್ಲಸ್ ಟು ಸೀಟು ಮತ್ತು ತರಗತಿಗೆ ಅರ್ಜಿದಾರರ ಸಂಖ್ಯೆಯನ್ನು ಸರ್ಕಾರ ನಿಖರವಾಗಿ ತಿಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ ಎರಡನೇ ಪೂರಕ ಹಂಚಿಕೆಯ ನಂತರವಷ್ಟೇ ನಿಖರ ಅಂಕಿ-ಅAಶ ಲಭ್ಯವಾಗಲಿದೆ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ಅಧಿಕಾರಿಗಳು ತಿಳಿಸಿದ್ದನ್ನು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಸೀಟು ವಿವಾದದ ಹಿನ್ನೆಲೆಯಲ್ಲಿ ಮಲಬಾರ್‌ನಲ್ಲಿ ತಾತ್ಕಾಲಿಕ ಬ್ಯಾಚ್‌ಗೆ ಅವಕಾಶ ನೀಡುವುದಾಗಿ ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ ಘೋಷಿಸಿದ್ದರು. ಮಲಪ್ಪುರಂನಲ್ಲಿ ೧೨೦ ಮತ್ತು ಕಾಸರಗೋಡಿನಲ್ಲಿ ೧೮ ಹೆಚ್ಚುವರಿ ಬ್ಯಾಚ್‌ಗಳನ್ನು ಅನುಮತಿಸಲಾಗುವುದು ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ತಿಳಿಸಿದ್ದರು.