ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕನನ್ನಾಗಿ ಸಂಸದ ಗೌರವ್ ಗೊಗೊಯ್ ಅವರನ್ನು ಪಕ್ಷ ಅಂತಿಮಗೊಳಿಸಿದೆ. ಈ ಕುರಿತು ಪಕ್ಷದ ನಿರ್ಧಾರವನ್ನು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಮೂಲಕ ರವಾನಿಸಿದೆ.
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕನನ್ನಾಗಿ ಸಂಸದ ಗೌರವ್ ಗೊಗೊಯ್ ಅವರನ್ನು ಪಕ್ಷ ಅಂತಿಮಗೊಳಿಸಿದೆ. ಈ ಕುರಿತು ಪಕ್ಷದ ನಿರ್ಧಾರವನ್ನು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಮೂಲಕ ರವಾನಿಸಿದೆ.
'ಎಕ್ಸ್'ನಲ್ಲಿ ಈ ಮಾಹಿತಿ ನೀಡಿರುವ ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, 'ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ಸಚೇತಕರನ್ನು ನೇಮಿಸುವ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರೆ ಬರೆದಿದ್ದಾರೆ' ಎಂದು ತಿಳಿಸಿದ್ದಾರೆ.
ಗೊಗೊಯ್ ಅವರು ಲೋಕಸಭೆಯಲ್ಲಿ ಉಪ ನಾಯಕರಾಗಿದ್ದರೆ, ಕೇರಳದಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೋಡಿಕುನ್ನಿಲ್ ಸುರೇಶ್ ಅವರು ಮುಖ್ಯ ಸಚೇತಕರಾಗಿರುತ್ತಾರೆ. ವಿರುಧುನಗರ ಸಂಸದ ಮಾಣಿಕಮ್ ಟ್ಯಾಗೋರ್ ಮತ್ತು ಕಿಶನ್‌ಗಂಜ್ ಸಂಸದ ಮೊಹಮ್ಮದ್ ಜಾವೇದ್ ಅವರು ಕಳಮನೆಯಲ್ಲಿ ಪಕ್ಷದ ಸಚೇತಕರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಲೋಕಸಭೆಯಲ್ಲೂ ಗೊಗೊಯ್ ಅವರು ಪಕ್ಷದ ಉಪ ನಾಯಕರಾಗಿದ್ದರು. ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಇತ್ತೀಚೆಗೆ ನೇಮಿಸಲಾಗಿದೆ.