HEALTH TIPS

ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ ! - ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಯಿ

             ಕೋಲಕಾತಾ : ನ್ಯಾಯಾಲಯದ ಕೆಲಸದ ಸಮಯ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತದೆ; ಆದರೆ ಕೆಲವು ನ್ಯಾಯಾಧೀಶರು ಬೆಳಿಗ್ಗೆ 11.30 ಕ್ಕೆ ಕುಳಿತುಕೊಳ್ಳುತ್ತಾರೆ ಮತ್ತು ಮಧ್ಯಾಹ್ನ 12.30 ಕ್ಕೆ ಏಳುತ್ತಾರೆ; ಆದರೆ ನ್ಯಾಯಾಲಯದ ಸಮಯ ಮಧ್ಯಾಹ್ನ 1.30 ರವರೆಗೆ ಇರುತ್ತದೆ.

            ಕೆಲವು ನ್ಯಾಯಾಧೀಶರು ಉತ್ತರಾರ್ಧದಲ್ಲಿ ವಿಚಾರಣೆಗೆ ಕುಳಿತುಕೊಳ್ಳುವುದಿಲ್ಲ, ಇದು ಆಶ್ಚರ್ಯಕಾರಕವಾಗಿದೆಯೆನ್ನುವ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಯಿಯವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಾಲಯದ ಕೊಠಡಿಯಲ್ಲಿ ತಡವಾಗಿ ಬರುತ್ತಿರುವ ವಿಷಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು. ಅವರು ಕೋಲಕಾತಾದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.

               ನ್ಯಾಯಮೂರ್ತಿಗಳ ಬಡ್ತಿಯ ಬಗ್ಗೆ ನ್ಯಾಯಮೂರ್ತಿ ಗವಯಿಯವರು ಮಾತನಾಡುತ್ತಾ, 'ಕೊಲಿಜಿಯಂ' (ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಕ್ರಿಯೆ) ಮಾಹಿತಿಯ ಮೇಲೆ (ಡೇಟಾಬೇಸ' ಮೇಲೆ) ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಬಡ್ತಿಗಾಗಿ ಹಲವು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಅಂಶಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಸಲಹೆಗಾರ ನ್ಯಾಯಾಧೀಶರು ಸೇರಿದ್ದು, ಅವರು ಈ ನ್ಯಾಯಾಧೀಶರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರಿಶೀಲಿಸುತ್ತಿರುತ್ತಾರೆ. ಆದ್ದರಿಂದ, ಉಚ್ಚನ್ಯಾಯಾಲಯದ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯದಲ್ಲಿ ಬಡ್ತಿಗಾಗಿ ಪ್ರಯತ್ನಿಸಬಾರದು. ಹೀಗೆ ಮಾಡುವುದು ನ್ಯಾಯಾಲಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

              ನ್ಯಾಯಮೂರ್ತಿ ಗವಯಿಯವರು ಮಾತನಾಡುತ್ತಾ, ನ್ಯಾಯವಾದಿಗಳಿಗೆ ಎಂದೂ ಸೂಕ್ತ ಗೌರವ ನೀಡಲಾಗುತ್ತಿಲ್ಲ. ನ್ಯಾಯಮೂರ್ತಿಗಳು ಅನೇಕ ಬಾರಿ ನ್ಯಾಯವಾದಿಗಳನ್ನು ಅವಮಾನಿಸುತ್ತಾರೆ. ಇದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

                  ನ್ಯಾಯಮೂರ್ತಿ ಗವಯಿಯವರು ಮಾತನಾಡುತ್ತಾ, ಹಿರಿಯ ಸರಕಾರಿ ಅಧಿಕಾರಿಗಳನ್ನು ವಿಚಾರ ಮಾಡದೆ ನ್ಯಾಯಾಲಯಕ್ಕೆ ಕರೆಸುವ ಪದ್ಧತಿ ನಿಲ್ಲಬೇಕು. ಕೆಲವು ನ್ಯಾಯಾಧೀಶರಿಗೆ ಹಿರಿಯ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಕರೆಸುವುದರಲ್ಲಿ ಮೋಜು ಅನಿಸುತ್ತದೆ. ಕೆಲವು ನ್ಯಾಯಾಧೀಶರು ಯೋಚಿಸದೆ ಇಂತಹ ಆದೇಶಗಳನ್ನು ನೀಡುತ್ತಾರೆ. ಸರಕಾರಿ ಅಧಿಕಾರಿಗಳು ಅವರ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂಬುದು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ನಡವಳಿಕೆ ತಪ್ಪಾಗಿದೆಯೆಂದು ಕಂಡು ಬಂದಿರುವಾಗ ಹೊರತು ಪಡಿಸಿ ಇಂತಹ ಸೂಚನೆಯನ್ನು ತಪ್ಪಿಸಬೇಕು.

          ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ನ್ಯಾಯಾಲಯದಲ್ಲಿ ಹೇಳಿದ ಯಾವುದೇ ವಿಷಯಗಳು ತ್ವರಿತವಾಗಿ ಪ್ರಸಾರವಾಗುತ್ತದೆ. ನಮ್ಮ ಶಬ್ದಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಈ ಶಬ್ದಗಳಿಂದ ನ್ಯಾಯವ್ಯವಸ್ಥೆಯ ಮೇಲೆ ಒತ್ತಡ ತರುತ್ತದೆ.

                 ನ್ಯಾಯಮೂರ್ತಿ ಗವಯಿಯವರು ತಮ್ಮ ಮಾತನ್ನು ಮುಂದುವರಿಸಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ, ನ್ಯಾಯಾಲಯ ಅಥವಾ ಎರಡೂ ಸರಕಾರಗಳಿಗೆ ನೀಡಿರುವ ಅಧಿಕಾರಗಳ ಮೌಲ್ಯಮಾಪನ ಮಾಡಬೇಕು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು ನ್ಯಾಯಾಲಯದ ಕೆಲಸ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries