ಪ್ಯಾರಿಸ್: ಬಲಪಂಥೀಯ ನಾಯಕಿ ಮರೀನ್ ಲಿ ಪೆನ್ ಅವರು 2022ರ ಅಧ್ಯಕ್ಷೀಯ ಚುನಾವಣೆ ವೇಳೆ ನಡೆಸಿದ ಅಭಿಯಾನಕ್ಕೆ ಅಕ್ರಮವಾಗಿ ಹಣಕಾಸು ನೆರವು ನೀಡಿದ ಆರೋಪದ ಬಗ್ಗೆ ಕಳೆದ ವಾರ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಸರ್ಕಾರಿ ವಕೀಲರ ಕಚೇರಿ ಮಂಗಳವಾರ ತಿಳಿಸಿದೆ.

ಸಾಲದ ಸ್ವೀಕಾರ, ಆಸ್ತಿಯ ದುರ್ಬಳಕೆ, ವಂಚನೆ ಮತ್ತು ಖೊಟ್ಟಿ ದಾಖಲೆ ಸೃಷ್ಟಿ ಆರೋಪದ ಬಗ್ಗೆ ಜುಲೈ 2ರಿಂದ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ. ಲಿ ಪೆನ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ವಹಿಸುವ 'ನ್ಯಾಷನಲ್ ಕಮಿಷನ್ ಫಾರ್ ಕ್ಯಾಂಪೇನ್ ಅಕೌಂಟ್ಸ್ ಆಯಂಡ್ ಪೊಲಿಟಿಕಲ್ ಫಿನಾನ್ಸ್' ವರದಿ ನೀಡಿದ ನಂತರ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.