HEALTH TIPS

ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್‌ ಅನುಮತಿ

                 ವದೆಹಲಿ (PTI): ಭ್ರೂಣದ ಬೆಳವಣಿಗೆಯಲ್ಲಿ ನ್ಯೂನತೆ ಇರುವುದರಿಂದ, 31 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

           ಭ್ರೂಣದ ನರಗಳ ಬೆಳವಣಿಗೆಯಲ್ಲಿ ತೊಂದರೆ ಕಾಣಿಸಿರುವುದರಿಂದ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರಿ 31 ವರ್ಷದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

              ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್‌ ನರೂಲಾ ಅವರು ಶನಿವಾರ ತೀರ್ಪು ನೀಡಿದರು.


             ಭ್ರೂಣದ ಬೆಳವಣಿಗೆಯಲ್ಲಿ ತೀವ್ರ ತೆರನಾದ ಅಸಹಜತೆಗಳಿದ್ದರೆ, ಅಂತಹ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಕಾನೂನು ಬಲವಂತಪಡಿಸುವುದಿಲ್ಲ ಎಂದು ಹೈಕೋರ್ಟ್‌ ತನ್ನ ಅದೇಶದಲ್ಲಿ ಹೇಳಿದೆ.

               ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನೀಡಿದ ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದ ಪೀಠ, ನರ ಸಂಬಂಧಿ ನ್ಯೂನತೆಗಳೊಂದಿಗೆ ಮಗು ಜನಿಸಿದರೆ, ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ತಿಳಿಸಿತು.

           'ಅರ್ಜಿದಾರ ಮಹಿಳೆಯ ಮೊದಲ ಮಗು, ನರ ಸಂಬಂಧಿ ನ್ಯೂನತೆಯಿಂದೆ ಬಳಲುತ್ತಿದೆ. ಇದೀಗ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಮಹಿಳೆ ಮತ್ತು ಅವರ ಕುಟುಂಬವು ನರ ಸಂಬಂಧಿ ಸಮಸ್ಯೆಗಳಿರುವ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಒತ್ತಡಕ್ಕೆ ಸಿಲುಕುತ್ತದೆ' ಎಂದು ಅಭಿಪ್ರಾಯಪಟ್ಟಿತು.

                ಇಲ್ಲಿನ ಲೋಕನಾಯಕ ಆಸ್ಪತ್ರೆಯ ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಮಹಿಳೆಯು ಜೂನ್‌ 13 ರಂದು ಹೈಕೋರ್ಟ್‌ ಮೊರೆ ಹೋಗಿದ್ದರು. ಮಹಿಳೆ ಮತ್ತು ಆಕೆಯ ಗರ್ಭವನ್ನು ತಪಾಸಣೆಗೆ ಒಳಪಡಿಸಲು ಲೋಕನಾಯಕ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಒಳಗೊಂಡ ಮಂಡಳಿಯನ್ನು ಹೈಕೋರ್ಟ್‌ ರಚಿಸಿತ್ತು. ಆದರೆ ಆ ವೈದ್ಯರ ಮಂಡಳಿ ನೀಡಿದ ವರದಿ 'ಅಪೂರ್ಣ' ಎಂಬುದನ್ನು ಮನಗಂಡ ಹೈಕೋರ್ಟ್‌, ಜುಲೈ 1 ರಂದು ಏಮ್ಸ್‌ನ ವೈದ್ಯರನ್ನು ಒಳಗೊಂಡ ಮಂಡಳಿಯನ್ನು ರಚಿಸಿತ್ತು. ಏಮ್ಸ್‌ ವೈದ್ಯರ ತಂಡ ನೀಡಿದ ವರದಿಯನ್ನು ಆಧರಿಸಿ ಗರ್ಭಪಾತಕ್ಕೆ ಅನುಮತಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries