ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ೨೦೨೫ರ ಚುನಾವಣಾ ತಯಾರಿಗಾಗಿ ಕಾಂಗ್ರೆಸ್‌ನ ಮಿಷನ್ ಆರಂಭದಲ್ಲೇ ಕುಸಿದಿದೆ.
ಜಿಲ್ಲೆಗಳನ್ನು ಕೇಂದ್ರೀಕರಿಸಿದ ಮೊದಲ ಸಭೆಯಲ್ಲೇ ಲೋಪ ಉಂಟಾಗಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಪರಸ್ಪರ ವಿರುದ್ದ ಬಣಗಳಾಗಿ ಬಹಿರಂಗಗೊAಡಿದ್ದಾರೆ. ಈ ಬಗ್ಗೆ ಕೇಂದ್ರ ಸಮಿತಿಗೆ ವರದಿ ನೀಡಲು ವಿ.ಡಿ ಸತೀಶನ್ ನಿರ್ಧಋಇಸಿರುವುದಾಗಿ ತಿಳಿದುಬಂದಿದೆ.
೧೬ ಮತ್ತು ೧೭ ರಂದು ವಯನಾಡಿನಲ್ಲಿ ನಡೆದ ನಾಯಕರ ಸಭೆಯಲ್ಲಿ ಮಿಷನ್ ೨೦೨೫ ರ ವರದಿಯನ್ನು ಎಲ್ಲಾ ಡಿಸಿಸಿಗಳೊಂದಿಗೆ ನಡೆಸಲು ನಿರ್ಧರಿಸಲಾಯಿತು. ಇದರ ಜವಾಬ್ದಾರಿಯನ್ನು ಸತೀಶನ್ ಅವರಿಗೆ ವಹಿಸಲಾಗಿತ್ತು. ತಿರುವನಂತಪುರದಲ್ಲಿ ನಿನ್ನೆ ಆರಂಭವಾದ ಶಿಬಿರದಲ್ಲಿ ವಯನಾಡ್ ಸಭೆಯ ನಿರ್ಣಯಗಳನ್ನು ವರದಿ ಮಾಡಲಾಯಿತು ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ತೃಪ್ತಿ ವ್ಯಕ್ತಪಡಿಸಿದರು. ಆದರೆ ಕೊನೆಯ ದಿನದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸತೀಶನ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು.
ಆನ್‌ಲೈನ್ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಸ್ಥಳೀಯ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಹಿರಿಯ ನಾಯಕರಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಟೀಕೆ ಎತ್ತಿದರು. ಸತೀಶನ್ ಹೊರಡಿಸಿರುವ ಸುತ್ತೋಲೆ ಹಿರಿಯ ನಾಯಕರಿಗೆ ಅವಮಾನ ಮಾಡುವಂತಿದ್ದು, ಹೊಸ ಕಾರ್ಯ ಸಮಾನಾಂತರ ವ್ಯವಸ್ಥೆಯಾಗಿದೆ ಎಂದು ಟೀಕಿಸಲಾಗಿದೆ. ವಿ.ಡಿ. ಸತೀಶನ್ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿರಲಿಲ್ಲ. ದೂರುಗಳನ್ನು ಪರಿಹರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.ಈ ಘಟನೆ ವಿ.ಡಿ.ಸತೀಶನ್ ಕೋಪಕ್ಕೆ ಕಾರಣವಾಯಿತು. ಇದರೊಂದಿಗೆ ವಿ.ಡಿ. ಸತೀಶ ಸಭೆ ಬಹಿಷ್ಕರಿಸಿದರು.
ಸತೀಶನ್ ಅನುಪಸ್ಥಿತಿಯನ್ನು ಬಳಸಿದ ಕೆ. ಸುಧಾಕರನ್ ಏಕಾಏಕಿ ವಾಕ್ಸಮರ ನಡೆಸಿದರು. ಬಳಿಕ ಸುಧಾಕರನ್ ಹೇಳಿಕೆಗೆ ಬಳಿ ಸತೀಶನ್ ಉತ್ತರಿಸಿದರು. ಸಭೆಯಲ್ಲಿ ಏನೇನು ಮಾತನಾಡಿದ್ದಾರೆ, ಏನು ಮಾತನಾಡಿಲ್ಲ ಎಂದು ಸುದ್ದಿ ಬಿತ್ತರಿಸಿದವರು ಪಕ್ಷದ ಬಂಧುಗಳಾಗಿದ್ದರೆ ತನಿಖೆಯಾಗಲಿ ಎಂದು ಸತೀಶನ್ ತಿರುಗೇಟು ನೀಡಿದರು. ಕೆಪಿಸಿಸಿ ಸಭೆಯಲ್ಲಿ ಟೀಕೆಗಳು ಬಂದರೆ ಸುದ್ದಿಯಾಗಬಾರದು, ಟೀಕೆ ಮಾಡಿರುವುದು ನಿಜವೇ ಆಗಿದ್ದರೆ ತಾವೂ ಸೇರಿದಂತೆ ಎಲ್ಲರೂ ತಿದ್ದುತ್ತಾರೆ ಎಂದು ಸತೀಶನ್ ಹೇಳಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕದನ ಇನ್ನಷ್ಟು ಜಟಿಲಗೊಳ್ಳುವ ಸೂಚನೆಗಳಿವೆ.