ಕಾಸರಗೋಡು: ಕಾನೂನಿನ ಜ್ಞಾನವು ಅಪಾಯಕಾರಿ ಸನ್ನಿವೇಶಗಳಿಂದ ದೂರವಿರುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ತಿಳಿಸಿದ್ದಾರೆ. ಅವರು ಜುಲೈ 1ರಿಂದ ದೇಶದಲ್ಲಿ ಜಾರಿಗೆ ಬಂದಿರುವ ನೂತನ ಕಾನೂನುಗಳ ಕುರಿತು ಜಿಲ್ಲೆಯ ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್(ಎಸ್‍ಪಿಸಿ) ಶಿಕ್ಷಕರಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ತರಗತಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾನೂನು ಪ್ರಜ್ಞೆಯುಳ್ಳವರಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಮುದಾಯ ಪೆÇಲೀಸ್ ಅಧಿಕಾರಿಗಳಾದ ಎಸ್‍ಪಿಸಿ ಶಿಕ್ಷಕರಿಗೆ ನಾಯಕತ್ವ ರೂಪಿಸುವ ಪಾತ್ರ ವಹಿಸಲು ಸಾಧ್ಯ ಎಂದು ತಿಳಿಸಿದರು. ಕೊಡಕ್ಕಾಡ್ ಕೇಳಪ್ಪಾಜಿ ಸ್ಮಾರಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಸಿ.ಗೋಪಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದ ಕುಂಡಂಕುಳಿ ಜಿಎಚ್‍ಎಸ್‍ಎಸ್‍ನ ಸಮುದಾಯ ಪೆÇಲೀಸ್ ಅಧಿಕಾರಿ ಕೆ.ಅಶೋಕನ್ ಹಾಗೂ ಜಿಲ್ಲೆಯಲ್ಲಿ ಅತ್ಯುತ್ತಮ ಮಕ್ಕಳ ಸ್ನೇಹಿ ಪೆÇಲೀಸ್ ಅಧಿಕಾರಿಯಾಗಿ ಆಯ್ಕೆಯಾದ ಬೇಕಲ ಪೆÇಲೀಸ್ ಠಾಣೆಯ ಹಿರಿಯ ಪೆÇಲೀಸ್ ಅಧಿಕಾರಿ ಎಂ.ಶೈಲಜಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪೆÇಲೀಸ್ ಕಾನೂನು ಸೆಲ್ ಎಎಸ್‍ಐ.ವಿನಯಕುಮಾರ್ ತರಗತಿ ನಡೆಸಿದರು. ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ.ತಂಬಾನ್ ಸ್ವಾಗತಿಸಿದರು. ಯೋಜನಾ ಸಹಾಯಕ ಕೆ.ಅನೂಪ್ ವಂದಿಸಿದರು.