ಕುಂಬಳೆ : ಕಳತ್ತೂರು ಸಮೀಪದ ಕಿದೂರು ಮುಂಡಿಕೆರೆ ಎಂಬಲ್ಲಿ ಅನಿರೀಕ್ಷಿತವಾಗಿ ಬಾವಿಯೊಂದಕ್ಕೆ ಬಿದ್ದ ರಾಷ್ಟಿçÃಯ ಪಕ್ಷಿ ನವಿಲನ್ನು ಕುಂಬಳೆ ಅಗ್ನಿಶಾಮಕ ದಳದ ಸಿಬ್ಬಂದಿಯವರೊ0ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬಳೆ ಶೌರ್ಯ ವಿಪತ್ತು ನಿರ್ವಹಣ ಸದಸ್ಯರು ಜತೆ ಸೇರಿ ಸಂರಕ್ಷಿಸಿದ ಘಟನೆಯೊಂದು ವರದಿಯಾಗಿದೆ.
ಸ್ಥಳೀಯ ಬಾವಿಯೊಂದಕ್ಕೆ ನವಿಲು ಬಿದ್ದ ವಿಷಯವನ್ನು ಅಗ್ನಿಶಾಮಕ ದಳದವರಿಗೆ ತಕ್ಷಣ ನೀಡಿದ್ದು ಘಟನಾ ಸ್ಥಳಕ್ಕೆ ಆಗಮಿಸಿದ ಅವರೊಂದಿಗೆ ಶೌರ್ಯದ ಸದಸ್ಯರೇ ಬಾವಿಗೆ ಇಳಿದು ನವಿಲಿನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು. ಶೌರ್ಯದ ಸದಸ್ಯರಾದ ಮೋಹನ, ಅಶೋಕ,ವಿನೋದ್,ಜಯಚಂದ್ರ ಕುಲಾಲ್, ಸತೀಶ, ಶಶಿಧರ, ಸರೀತಾ ಸಹಕರಿಸಿದ್ದರು.ಅಗ್ನಿ ಶಾಮಕ ದಳದ ಸೀನಿಯರ್ ಆಫೀಸರ್ ವಿಜೇಶ್ ವಿ.ವಿ, ಅಧಿಕಾರಿಗಳಾದ ಅತುಲ್, ರವೀಂದ್ರನ್,ಮಹೇಶ್ ವಿ.ವಿ,ಹೋಂಗಾರ್ಡ್ ಶ್ರೀನಿತ್ ಕುಮಾರ್, ಚಾಲಕ ರಂಜಿತ್ ಮೊದಲಾದವರಿದ್ದರು.