ನವದೆಹಲಿ: 'ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಅಂತಿಮ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಆದರೆ, ಇದಕ್ಕೆ ಪೂರಕವಾದ ಯಾವ ದಾಖಲೆಗಳನ್ನೂ ಸಲ್ಲಿಸಿಲ್ಲ. ಆದ್ದರಿಂದ, ಈ ದೋಷಾರೋಪ ಪಟ್ಟಿಯನ್ನು ಅಧಿಕಾರಯುತವಾಗಿ ಗುರುತಿಸಬೇಕೇ, ಬೇಡವೇ ಎನ್ನುವ ಕುರಿತು ಆಗಸ್ಟ್ 12ರಂದು ವಿಚಾರಣೆ ನಡೆಸಲಾಗುವುದು' ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಹೇಳಿದೆ.