HEALTH TIPS

ವಿಶ್ವದ ಮೊದಲ CNG ಬೈಕ್‌ ಹೆಸರು 'ಬಜಾಜ್‌ ಫ್ರೀಡಂ 125 CNG': ಬೈಕ್‌ ಬೆಲೆ ಎಷ್ಟು ಗೊತ್ತಾ, ನಾಳೆ ಲಾಂಚ್‌!

 ನಿಮಗೆಲ್ಲಾ ತಿಳಿದಿರುವಂತೆ ಬಜಾಜ್‌ ಆಗಾಗ ಹೊಸ ಪ್ರಯೋಗಗಳಿಗೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುತ್ತಲೂ ಇದೆ. ಈ ಮೂಲಕ ಬಜಾಜ್‌ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಸೇವೆಯನ್ನು ಒದಗಿಸುತ್ತಿದ್ದು, ತನ್ನ ಉತ್ಪನ್ನಗಳ ಮಾರಾಟವನ್ನೂ ಅಧಿಕವಾಗಿಸುತ್ತಿದೆ. ಇದೀಗ ಬಜಾಜ್‌, ದ್ವಿಚಕ್ರ ವಾಹನ ನಿರ್ಮಾಣದಲ್ಲಿ ಬಹುದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಲಿದ್ದು, ಇದನ್ನು ನಾಳೆ ಲೋಕಾರ್ಪಣೆಗೊಳಿಸಲಿದೆ.

ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಜಾಜ್ ಪೆಟ್ರೋಲ್‌+ ಸಿಎನ್‌ಜಿ ಚಾಲಿತ ಬೈಕ್‌ ಅನ್ನು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದ್ದು, ಇದೀಗ ಆ ಬೈಕ್‌ನ ಹೆಸರು ಕಂಪನಿಯ ಔದ್ಯೋಗಿಕ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ.

ಹೌದು, ಎರಡೂ ಇಂಧನ ಚಾಲಿತವಾದ ಬೈಕ್ ಅನ್ನು ಬಜಾಜ್‌ ಜುಲೈ ಐದರಂದು ಅನಾವರಣಗೊಳಿಸಲಿದ್ದು, ಈ ಬೈಕ್‌ನ ಹೆಸರು ಬಜಾಜ್‌ ಫ್ರಿಡಂ 125 CNG ಆಗಿರಲಿದೆ ಎಂದು ತಿಳಿದು ಬಂದಿದೆ. ಈ ಹೆಸರಿನ ಮೂಲಕ, ಜನರಿಗೆ ಈ ಬೈಕ್‌ನೊಂದಿಗೆ ಹೆಚ್ಚಿನ ಖರ್ಚಿಲ್ಲದೇ ಎಲ್ಲಿಗೆ ಬೇಕಾದರೂ ಪ್ರಯಾಣಿಸುವ ಫ್ರೀಡಂ, ನಿಮ್ಮ ಜೇಬುಗಳಿಗೂ ಹೆಚ್ಚಿನ ವ್ಯಯಗಳಿಂದ ಫ್ರೀಡಂ ಸಿಗಲಿದೆ ಎಂದು ಮಾರ್ಮಿಕವಾಗಿ ಹೇಳುತ್ತಿದೆ.


ಬಜಾಜ್‌ನ ಮುಂಬರುವ CNG ಮೋಟಾರ್‌ಸೈಕಲ್‌ನ ನಿರೀಕ್ಷೆಯು ತುಂಬಾ ಹೆಚ್ಚಾಗಿದೆ ಏಕೆಂದರೆ ಇದು ಭಾರತದಲ್ಲಿ ಅತ್ಯಂತ ಪರಿಣಾಮಕಾರಿ ಮೋಟಾರ್‌ಸೈಕಲ್ ಆಗಿರಬಹುದು ಮತ್ತು ಮೈಲೇಜ್‌ ನೋಡಿದರೆ ಈ ಬೈಕ್‌ ಬಹುಶಃ 100 km/kg ವರೆಗೆ ಇರಬಹುದು ಎನ್ನಲಾಗುತ್ತಿದೆ. ಬಜಾಜ್‌ನ ಇತ್ತೀಚಿನ ಟೀಸರ್‌ಗಳು ಬೈಕ್ ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂಚಲಿಸುವುದರಿಂದ ಸಾಮಾನ್ಯ ವರ್ಗದ ಜನರಿಗೆ ಇದು ಹೆಚ್ಚು ಸಹಕಾರಿಯಾಗಿರಲಿದೆ.

ಕಳೆದ ಕೆಲ ವರ್ಷಗಳಲ್ಲಿ ಪೆಟ್ರೋಲ್ ಬೆಲೆಗಳು ಗಗನಕ್ಕೇರಿವೆ, 100 ರೂ. ದಾಟಿ ಓಡುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆಯಾದರೂ, ಸುರಕ್ಷತೆಯ ವಿಷಯದಲ್ಲಿ ಜನರಲ್ಲಿ ಭಯವೂ ಕಾಡುತ್ತಿದೆ. ಹೀಗಿದ್ದಾಗ ಸಾಮಾನ್ಯ ಜನರಿಗೆ ವಿಶ್ವಾಸಾರ್ಹ ಕೈಗೆಟುಕುವ ಸಿಎನ್‌ಜಿ ಮೋಟಾರ್‌ಸೈಕಲ್‌ಗಳು ಗೇಮ್‌ ಚೇಂಜರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಧಿಕೃತ ವೆಬ್‌ಸೈಟ್‌ನಿಂದ ಸೂಚಿಸಲಾದ ಫ್ರೀಡಮ್ 125 ಹೆಸರು (Freedom 125 CNG), ಬೈಕ್‌ನ ಎಂಜಿನ್ ಬಗ್ಗೆಯೂ ಮಾಹಿತಿಯೂ ಸೋರಿಕೆಯಾಗಿದೆ. ಈ ಹೊಸ ಬೈಕ್‌ನಲ್ಲಿ ಸುಮಾರು 125cc ಎಂಜಿನ್‌ ಇರಲಿದ್ದು, ಈ ಎಂಜಿನ್‌ ಸಹಾಯದಿಂದ ಈ ಬೈಕ್‌ ಕಾರ್ಯ ನಿರ್ವಹಿಸಲಿದೆ. ಬಹುಶಃ ಬಜಾಜ್‌ನ ಇತರ 125cc ಬೈಕ್‌ಗಳ ಎಂಜಿನ್‌ ಇದರಲ್ಲಿಯೂ ಇರಬಹುದು ಎಂಬುದು ಎಲ್ಲರ ಅಭಿಪ್ರಾಯ.

ಕಮ್ಯೂಟರ್ ಬೈಕ್ ಆಗಿ ವಿನ್ಯಾಸಗೊಳಿಸಲಾದ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.85,000 ವಿರಬಹುದು. ಸ್ಟ್ಯಾಂಡರ್ಡ್ ಕಮ್ಯೂಟರ್ ಮೋಟಾರ್ ಸೈಕಲ್‌ಗಳಿಗೆ ಹೋಲಿಸಿದರೆ ಬಜಾಜ್ ಸಿಎನ್‌ಜಿ ಬೈಕ್ ಕಾರ್ಯಾಚರಣಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗೆಯೇ ಮೈಲೇಜ್‌ಗೆ ಹೆಚ್ಚಿನ ಆದ್ಯತೆ ನೀಡುವವರಿಗೆ ಆಕರ್ಷಕ ಆಯ್ಕೆಯಾಗಲಿದೆ.

ಇದು ಸಾಮಾನ್ಯ ಬೈಕ್‌ಗಳಂತಲ್ಲದೇ ಸ್ಟ್ಯಾಂಡರ್ಡ್ ಫ್ಯೂಯಲ್ ಟ್ಯಾಂಕ್ ಕೆಳಗೆ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿರುತ್ತದೆ. ಈ ಮೂಲಕ ದ್ವಿ-ಇಂಧನ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಚಲಿಸುವ ಇದರ ಸಾಮರ್ಥ್ಯವು ವಿವಿಧ ಭೂಪ್ರದೇಶಗಳಿಗೆ ಹೊಂದಿಕೊಳ್ಳುತ್ತದೆ. ಇದು 125 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಬರಲಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries