ನವದೆಹಲಿ: ಕೋವಿಡ್ -19 ಸೋಂಕು ತಗುಲಿದ್ದ ಮಕ್ಕಳಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶವು ಅಧ್ಯಯನ ಮೂಲಕ ತಿಳಿದುಬಂದಿದೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ವರದಿ ಮಾಡಿದೆ.
ನವದೆಹಲಿ: ಕೋವಿಡ್ -19 ಸೋಂಕು ತಗುಲಿದ್ದ ಮಕ್ಕಳಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶವು ಅಧ್ಯಯನ ಮೂಲಕ ತಿಳಿದುಬಂದಿದೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ವರದಿ ಮಾಡಿದೆ.
ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಭವಿಷ್ಯದಲ್ಲಿ ಅದರ ತೀವ್ರತೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ.
ಟೈಪ್ -1 ಮಧುಮೇಹ ಲಕ್ಷಣಗಳೆಂದರೆ, ಅಸಹಜ ಬಾಯಾರಿಕೆ ಮತ್ತು ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ದೃಷ್ಟಿ ಮಸುಕಾಗುವುದು, ಸುಸ್ತು ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ಥೆರಪಿ ಮತ್ತು ಚುಚ್ಚುಮದ್ದು ಪಡೆಯುವುದೇ ಇದಕ್ಕಿರುವ ಚಿಕಿತ್ಸೆ ಎನ್ನಲಾಗಿದೆ
ಹಿಂದಿನ ಅಧ್ಯಯನಗಳಲ್ಲಿ, ಕೋವಿಡ್-19ಗೆ ಒಳಗಾದ ಮಕ್ಕಳಲ್ಲಿ ಐಸ್ಲೆಟ್ ಪ್ರತಿಕಾಯಗಳು ಕಂಡುಬಂದಿವೆ. ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ಹಾನಿಗೊಳಗಾದಾಗ ಇವು ಉತ್ಪತ್ತಿಯಾಗುತ್ತದೆ. ಒಬ್ಬರ ರಕ್ತದ ಮಾದರಿಗಳಿಂದ ಈ ಸ್ವಯಂ ಪ್ರತಿಕಾಯಗಳು ಟೈಪ್ 1 ಮಧುಮೇಹವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ತಿಳಿದುಬಂದಿದೆ.
ಈ ಅಧ್ಯಯನದಲ್ಲಿ ಸಂಶೋಧಕರು ಜರ್ಮಿನಿಯ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟೀಸ್ ರಿಸರ್ಚ್, ಹೆಮೊಟ್ ಮ್ಯುನಿಕ್ ವರದಿಯನ್ನೂ ಸೇರಿಸಿದ್ದಾರೆ. ಇವರ ಪ್ರಕಾರ, ಅದಾಗಲೇ ಲಕ್ಷಣರಹಿತ ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದರೆ, ಅಂಥವರಲ್ಲಿ ಮಧುಮೇಹದ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ.