ನವದೆಹಲಿ: ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು 46 ರೈಲುಗಳಿಗೆ 92 ಸಾಮಾನ್ಯ ಬೋಗಿಗಳನ್ನು ಹೆಚ್ಚುವರಿಯಾಗಿ ಸೇರಿಸಲು ನಿರ್ಧರಿಸಿದೆ.
ನವದೆಹಲಿ: ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು 46 ರೈಲುಗಳಿಗೆ 92 ಸಾಮಾನ್ಯ ಬೋಗಿಗಳನ್ನು ಹೆಚ್ಚುವರಿಯಾಗಿ ಸೇರಿಸಲು ನಿರ್ಧರಿಸಿದೆ.
'22 ಇತರ ರೈಲುಗಳನ್ನೂ ಗುರುತಿಸಲಾಗಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡಯಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ' ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಕರ್ನಾಟಕವನ್ನು ಸಂಪರ್ಕಿಸುವ ರೈಲುಗಳು: ಗುವಾಹಟಿ- ಬೆಂಗಳೂರು ಸೂಪರ್‌ಪಾಸ್ಟ್ ಎಕ್ಸ್‌ಪ್ರೆಸ್, ಜೈಪುರ- ಮೈಸೂರು ಸೂಪರ್‌ಪಾಸ್ಟ್ ಎಕ್ಸ್‌ಪ್ರೆಸ್, ಬೆಂಗಳೂರು-ಭಾಗಲ್ಪುರ ಎಕ್ಸ್‌ಪ್ರೆಸ್, ಯಶವಂತಪುರ-ಕಣ್ಣೂರು ಎಕ್ಸ್‌ಪ್ರೆಸ್, ಅಜ್ಮೆರ್- ಮೈಸೂರು ಎಕ್ಸ್‌ಪ್ರೆಸ್, ಮೈಸೂರು- ಟ್ಯುಟಿಕಾರಿನ್ ಎಕ್ಸ್‌ಪ್ರೆಸ್, ಜೋಧ್‌ಪುರ- ಬೆಂಗಳೂರು ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು ನಗರ- ಬೆಳಗಾವಿ ಸೂಪರ್‌ಪಾಸ್ಟ್ ಎಕ್ಸ್‌ಪ್ರೆಸ್, ಚೆನ್ನೈ ಸೆಂಟ್ರಲ್- ಹುಬ್ಬಳ್ಳಿ ಸೂಪರ್‌ಪಾಸ್ಟ್ ಎಕ್ಸ್‌ಪ್ರೆಸ್, ಬೆಂಗಳೂರು- ಭಾಗಲ್ಪುರ ಎಎನ್‌ಜಿ ಎಕ್ಸ್‌ಪ್ರೆಸ್, ಬೆಂಗಳೂರು ನಗರ- ಸಂಗ್ಲಿ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್, ಮುಂಬೈ- ಬೆಂಗಳೂರು ಉದಯನ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಗಿದೆ.