ಮುಂಬೈ: ಭಾರತೀಯ ನೌಕಾಪಡೆಯ ಐಎನ್‌ಎಸ್ ಬ್ರಹ್ಮಪುತ್ರ ಹಡಗಿನಲ್ಲಿ ಭಾನುವಾರ(ಜುಲೈ 21) ಸಂಜೆ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ಯುದ್ಧನೌಕೆ ಮುಂಬೈನ ನೌಕಾನೆಲೆಯಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ತೀವ್ರ ಪ್ರಯತ್ನದ ನಂತರ ಸೋಮವಾರ ಬೆಳಗ್ಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಮುಂಬೈ: ಭಾರತೀಯ ನೌಕಾಪಡೆಯ ಐಎನ್‌ಎಸ್ ಬ್ರಹ್ಮಪುತ್ರ ಹಡಗಿನಲ್ಲಿ ಭಾನುವಾರ(ಜುಲೈ 21) ಸಂಜೆ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ಯುದ್ಧನೌಕೆ ಮುಂಬೈನ ನೌಕಾನೆಲೆಯಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ತೀವ್ರ ಪ್ರಯತ್ನದ ನಂತರ ಸೋಮವಾರ ಬೆಳಗ್ಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಯುದ್ಧನೌಕೆ ಗಂಭೀರವಾಗಿ ಒಂದು ಬದಿಗೆ (ಪೋರ್ಟ್ ಸೈಡ್) ವಾಲಿದೆ ಎಂದು ನೌಕಾಪಡೆ ತಿಳಿಸಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಹಡಗನ್ನು ನೇರಗೊಳಿಸಲು ಸಾಧ್ಯವಾಗಲಿಲ್ಲ. ಹಡಗು ತನ್ನ ಬರ್ತ್ ಉದ್ದಕ್ಕೂ ಮತ್ತಷ್ಟು ಓರೆಯಾಗುವುದನ್ನು ಮುಂದುವರೆಸಿತು ಎಂದು ತಿಳಿಸಿದ್ದಾರೆ.
ಒಬ್ಬ ಕಿರಿಯ ನಾವಿಕನನ್ನು ಹೊರತುಪಡಿಸಿ ಎಲ್ಲಾ ಸಿಬ್ಬಂದಿಯನ್ನು ಪತ್ತೆಹಚ್ಚಲಾಗಿದೆ. ನಾಪತ್ತೆಯಾಗಿರುವ ನಾವಿಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮುಂಬೈ ನೇವಲ್ ಡಾಕ್‌ಯಾರ್ಡ್‌ನಲ್ಲಿ ಭಾನುವಾರ ಸಂಜೆ ಐಎನ್‌ಎಸ್ ಬ್ರಹ್ಮಪುತ್ರ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ಬಗ್ಗೆ ತಿಳಿಯಲು ಭಾರತೀಯ ನೌಕಾಪಡೆ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಸಮುದ್ರದಲ್ಲಿ ಯಾವುದೇ ರೀತಿಯ ಯುದ್ಧವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ INS ಬ್ರಹ್ಮಪುತ್ರ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಯುದ್ಧನೌಕೆ ಆಗಿದೆ. ಇದನ್ನು ಏಪ್ರಿಲ್ 2000ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಲಾಯಿತು. ಈ ಹಡಗು 40 ಅಧಿಕಾರಿಗಳು ಮತ್ತು 330 ನಾವಿಕರನ್ನು ಹೊಂದಿದೆ. INS ಬ್ರಹ್ಮಪುತ್ರ ಮಧ್ಯಮ ಶ್ರೇಣಿಯ, ಸಮೀಪ ವ್ಯಾಪ್ತಿಯ ಮತ್ತು ವಿಮಾನ ವಿರೋಧಿ ಬಂದೂಕುಗಳನ್ನು ಹೊಂದಿದೆ. ಇದಲ್ಲದೆ ಈ ಯುದ್ಧನೌಕೆಯು ಮೇಲ್ಮೈಯಿಂದ ಮೇಲ್ಮೈ ಮತ್ತು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿಗಳು ಮತ್ತು ಟಾರ್ಪಿಡೊ ಲಾಂಚರ್‌ಗಳನ್ನು ಹೊಂದಿದೆ. ಇದು ಸೀಕಿಂಗ್ ಮತ್ತು ಚೇತಕ್ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.