HEALTH TIPS

ರೋಗಿಗಳ ವರದಿ ಹಾಳೆಯಿಂದ ತಟ್ಟೆ ತಯಾರಿಸಿದ KEM ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್

           ಮುಂಬೈ: ರೋಗಿಗಳ ವರದಿಯನ್ನು ಒಳಗೊಂಡ ಹಾಳೆಯನ್ನೇ ತಿನ್ನುವ ತಟ್ಟೆಯನ್ನಾಗಿಸಿಕೊಂಡು ಚಿತ್ರೀಕರಿಸಿದ ಕಿಂಗ್‌ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ಆರು ಜನ ಸಿಬ್ಬಂದಿಗೆ ಅಲ್ಲಿನ ಆಡಳಿತ ಮಂಡಳಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

       ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಮಾಜಿ ಮೇಯರ್ ಕಿಶೋರಿ ಪಂಡ್ನೇಕರ್‌, ಸರ್ಕಾರಿ ಸ್ವಾಮ್ಯ ಕೆಇಎಂ ಆಸ್ಪತ್ರೆಯಲ್ಲಿ ರೋಗಿಗಳ ವರದಿ ಹಾಳೆಗಳು ತಟ್ಟೆಗಳನ್ನಾಗಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.


           ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಡೀನ್ ಡಾ. ಸಂಗೀತಾ ರಾವತ್, 'ಅವು ರೋಗಿಗಳ ವರದಿ ಹಾಳೆಗಳಲ್ಲ. ಬದಲಿಗೆ ಸಿ.ಟಿ. ಸ್ಕ್ಯಾನ್‌ ವರದಿ ಹಾಕಲು ಬಳಸಿದ ಫೋಲ್ಡರ್‌ಗಳು. ಅವುಗಳನ್ನು ಬಳಸಿ ತಟ್ಟೆ ಮಾಡಲಾಗಿದೆ. ಆದರೆ ಇಲ್ಲಿ ಆಗಿರುವ ತಪ್ಪೆಂದರೆ, ಈ ಹಾಳೆಗಳನ್ನು ಚೂರು ಚೂರು ಮಾಡಿರಲಿಲ್ಲ' ಎಂದಿದ್ದಾರೆ.

             'ಈ ಕುರಿತು ಆರು ಜನ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries