HEALTH TIPS

ಕೇಂದ್ರಕ್ಕೆ ಜೆಡಿಯು,ಟಿಡಿಪಿಯೇ ಊರುಗೋಲು: NDA ವಿರುದ್ಧ ಹರಿಹಾಯ್ದ ವಿಪಕ್ಷಗಳು

           ವದೆಹಲಿ: ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಪ್ರದರ್ಶಿಸಿದ 'ದುರಹಂಕಾರ' ಮತ್ತು 'ಪ್ರತೀಕಾರ ಮನೋಭಾವ' ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಂಕಾಗುವಂತೆ ಮಾಡಿತು. ಈಗ ಅವರು ಸ್ಥಿರ ಸರ್ಕಾರಕ್ಕಾಗಿ ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಗಿದೆ ಎಂದು ವಿರೋಧ ಪಕ್ಷಗಳು ಸಂಸತ್‌ನಲ್ಲಿ ಮಂಗಳವಾರ ಹೇಳಿವೆ.

          ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ವಿರೋಧ ಪಕ್ಷಗಳ ನಾಯಕರು ಆಡಳಿತಾರೂಢ ಬಿಜೆಪಿಯನ್ನು ಕುಟುಕಿದರು.

            ಟಿಎಂಸಿ ಸದಸ್ಯ ಕಲ್ಯಾಣ ಬ್ಯಾನರ್ಜಿ,'ಈ ಬಾರಿಯ ಲೋಕಸಭಾ ಚುನಾವಣೆ ದೇಶದಲ್ಲಿ ಬದಲಾವಣೆ ತಂದಿದೆ. ದೇಶದಲ್ಲಿ ಈಗ ಅಸ್ಥಿರ ಸರ್ಕಾರ ಮತ್ತು ಪ್ರಬಲ ವಿರೋಧ ಪಕ್ಷ ಇದೆ' ಎಂದರು.

'ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್‌ ಕುಮಾರ್ ಎಂಬ ಎರಡು ಊರುಗೋಲುಗಳ ನೆರವಿನಿಂದ ಪ್ರಧಾನಿ ನರೇಂದ್ರ ಮೋದಿ ಈಗ ಸರ್ಕಾರ ನಡೆಸುತ್ತಿದ್ದಾರೆ' ಎಂದೂ ಬ್ಯಾನರ್ಜಿ ಹೇಳಿದರು.

              'ಕಳೆದ 10 ವರ್ಷಗಳ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರು ಅಥವಾ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಕುರಿತು ಪ್ರಧಾನಿ ಮೃದು ಭಾಷೆ ಇಲ್ಲವೇ ಉತ್ತಮ ಪದಗಳನ್ನು ಬಳಸಿದ್ದನ್ನು ಕೇಳಿಲ್ಲ. ಪಶ್ಚಿಮ ಬಂಗಾಳದಲ್ಲಿ ನೀವು ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದ್ವೇಷಿಸುತ್ತೀರಿ. ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್, ಜಾರ್ಖಂಡ್‌ನಲ್ಲಿ ಹೇಮಂತ ಸೊರೇನ್ ಹಾಗೂ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌, ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ, ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ದ್ವೇಷಿಸುತ್ತೀರಿ' ಎಂದು ಟೀಕಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries