HEALTH TIPS

NEET-UG: 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಶೂನ್ಯ ಅಥವಾ ನೆಗೆಟಿವ್ ಅಂಕ!

        ವದೆಹಲಿ: ಈ ವರ್ಷದ ವಿವಾದಿತ ವೈದ್ಯಕೀಯ 'ನೀಟ್‌-ಯುಜಿ' ಪರೀಕ್ಷೆಯ ಕೇಂದ್ರವಾರು ಫಲಿತಾಂಶಗಳ ಪ್ರಕಾರ, 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಶೂನ್ಯ ಅಥವಾ ನೆಗೆಟಿವ್ ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

         ಬಿಹಾರದ ಕೇಂದ್ರವೊಂದರಲ್ಲಿ ಅಭ್ಯರ್ಥಿವೊಬ್ಬರು ಅತಿ ಕಡಿಮೆ ಅಂಕ (ನೆಗೆಟಿವ್ 180) ಗಳಿಸಿದ್ದಾರೆ.

ಈ ವರ್ಷದ 'ನೀಟ್‌-ಯುಜಿ' ಪರೀಕ್ಷೆಯ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ರಾಷ್ಟ್ರೀಯ      ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಕಟಗೊಳಿಸಿತ್ತು.

          ಇದರ ಪ್ರಕಾರ, 2,250ಕ್ಕೂ ಅಧಿಕ ಅಭ್ಯರ್ಥಿಗಳು ಶೂನ್ಯ ಅಂಕ ಮತ್ತು 9,400ಕ್ಕೂ ಹೆಚ್ಚು ಅಭ್ಯರ್ಥಿಗಳು ನೆಗೆಟಿವ್ ಅಂಕಗಳನ್ನು ಗಳಿಸಿದ್ದಾರೆ.

            ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರ ಬಿಂದು ಆಗಿರುವ ಜಾರ್ಖಂಡ್‌ನ ಹಜಾರೀಬಾಗ್‌ನಲ್ಲಿ, ಹಲವಾರು ಅಭ್ಯರ್ಥಿಗಳು ಶೂನ್ಯಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ.

             'ನೀಟ್‌-ಯುಜಿ' ಪರೀಕ್ಷೆಯನ್ನು ರದ್ದುಪಡಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜುಲೈ 22ರಂದು ಪುನರಾರಂಭಿಸಲಿದೆ.

ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಬಜೆಟ್‌ ಅಧಿವೇಶನದಲ್ಲೂ ಈ ಕುರಿತು ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಹಾಗಾಗಿ ಕಾವೇರಿದ ಚರ್ಚೆ, ಕೋಲಾಹಲಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries