ನವದೆಹಲಿ: 2024ರ ನೀಟ್-ಯುಜಿ ಪರೀಕ್ಷೆಯಲ್ಲಿ ಭೌತವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಯಲ್ಲಿನ ನಿರ್ದಿಷ್ಟ ಪ್ರಶ್ನೆಗೆ ಒಂದೇ ಉತ್ತರ ಸರಿಯಾಗಿತ್ತು. ಆದರೆ, ಎರಡು ಸರಿಯಾದ ಉತ್ತರಗಳು ಇರಲಿಲ್ಲ ಎಂದು ದೆಹಲಿ ಐಐಟಿಯ ಮೂವರು ತಜ್ಞರ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಈ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರಿದ್ದ ಪೀಠವು, 'ಭೌತವಿಜ್ಞಾನದ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಯ ಉತ್ತರಕ್ಕೆ ಸಂಬಂಧಿಸಿ ದೆಹಲಿಯ ಐಐಟಿಯ ವರದಿ ನಮ್ಮ ಕೈಸೇರಿದೆ. ಐಐಟಿಯ ನಿರ್ದೇಶಕ ರಂಗನ್ ಬ್ಯಾನರ್ಜಿ ಅವರು ಉತ್ತರದ ಪರಿಶೀಲನೆಗಾಗಿ ಸಮಿತಿ ರಚಿಸಿದ್ದರು. ಮೂವರ ತಜ್ಞರ ಸಮಿತಿಯು ಪರಿಶೀಲನೆ ನಡೆಸಿದ್ದು, ಆ ನಿರ್ದಿಷ್ಟ ಪ್ರಶ್ನೆಗೆ ಸರಿಯಾದ ಉತ್ತರ ನಾಲ್ಕನೇ ಆಯ್ಕೆಯಾಗಿದೆ ಎಂಬುದಾಗಿ ಅವರು ವರದಿಯಲ್ಲಿ ವಿವರಿಸಿದ್ದಾರೆ' ಎಂದು ತಿಳಿಸಿದರು.
ಈ ಪ್ರಶ್ನೆಗೆ 'ಮೊದಲನೆಯ ಹೇಳಿಕೆಯು ಸರಿಯಾಗಿದೆ. ಆದರೆ, 2ನೇಯ ಹೇಳಿಕೆಯು ತಪ್ಪಾಗಿದೆ' ಎಂಬ ನಾಲ್ಕನೇ ಆಯ್ಕೆಯು ಸರಿಯಾದ ಉತ್ತರ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು. ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಪರವಾಗಿ ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು.