HEALTH TIPS

Religious Conversion: ''ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ'': Allahabad High Court

Top Post Ad

Click to join Samarasasudhi Official Whatsapp Group

Qries

Qries

       ಅಲಹಾಬಾದ್: ಧಾರ್ಮಿಕ ಸಭೆಗಳಲ್ಲಿ ಮತಾಂತರಕ್ಕೆ ತಡೆ ಒಡ್ಡದಿದ್ದರೆ ಮುಂದೊಂದು ದಿನ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

      ಅರ್ಜಿದಾರ ಕೈಲಾಶ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯಿದೆ, 2021ರ ಅಡಿಯಲ್ಲಿ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಈ ವಿಚಾರ ತಿಳಿಸಿದರು.

       ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದ್ದ "ಕ್ಷೇಮ" ಕೂಟಕ್ಕೆ ಮಾಹಿತಿದಾರನ ಸಹೋದರನನ್ನು ಆತನ ಗ್ರಾಮದಿಂದ ಕರೆದೊಯ್ಯಲಾಗಿತ್ತು. ಅವನೊಂದಿಗೆ, ಹಳ್ಳಿಯ ಅನೇಕ ವ್ಯಕ್ತಿಗಳನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಲು ಕರೆದೊಯ್ಯಲಾಗಿತ್ತು.

     ಈ ಹಿನ್ನೆಲೆಯಲ್ಲಿ ಇಂತಹ ಆಚರಣೆ ಮುಂದುವರೆಸಲು ಅವಕಾಶ ನೀಡಿದರೆ ಮುಂದೊಂದು ದಿನ ಬಹುಸಂಖ್ಯಾತರೆಲ್ಲಾ ಅಲ್ಪಸಂಖ್ಯಾತರಾಗುತ್ತಾರೆ. ಧರ್ಮ ಬದಲಾಯಿಸುವ ಇಂತಹ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

      ಸಂವಿಧಾನದ 25ನೇ ವಿಧಿ ಜನರು ತಮ್ಮಿಚ್ಛೆಯ ಧರ್ಮ ಪಾಲಿಸಲು ಅನುಮತಿಸುತ್ತದೆ. ಆದರೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಲು ಅವಕಾಶ ನೀಡುವುದಿಲ್ಲ. "ಪ್ರಚಾರ” ಎಂಬ ಪದ ಧರ್ಮ ಪ್ರಚಾರವನ್ನು ಮಾತ್ರ ಹೇಳುತ್ತದೆ.

     ಆದರೆ ಯಾವುದೇ ವ್ಯಕ್ತಿಯನ್ನು ಆತನ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪರಿವರ್ತಿಸುವಂತೆ ಹೇಳುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.


     ಉತ್ತರ ಪ್ರದೇಶದೆಲ್ಲೆಡೆ ಎಸ್ಸಿ/ಎಸ್ಟಿ ಮತ್ತು ಆರ್ಥಿಕವಾಗಿ ಬಡವರಾಗಿರುವವರನ್ನು ಅತಿ ವೇಗವಾಗಿ ಕ್ರೈಸ್ತ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

Below Post Ad


ಜಾಹಿರಾತು














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries