HEALTH TIPS

World Chocolate Day 2024: ಮಗುವಿನ ಬೆಳವಣಿಗೆಗೆ ಡಾರ್ಕ್ ಚಾಕೊಲೇಟ್ ಉತ್ತಮವೇ, ತಜ್ಞರು ಹೇಳುವುದೇನು?

 ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ನೀವು ಚಾಕೊಲೇಟ್ ತಿನ್ನುವುದು ಒಳ್ಳೆಯದಲ್ಲ ಎಂದುಕೊಂಡಿದ್ದರೆ ಆ ನಂಬಿಕೆಯನ್ನು ದೂರ ಮಾಡುವಂತಹ ಸುದ್ದಿ ಇಲ್ಲಿದೆ. ಹೌದು, ವಾಸ್ತವವದಲ್ಲಿ ಡಾರ್ಕ್ ಚಾಕೊಲೇಟ್ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ ಅದರಲ್ಲಿಯೂ ಮಕ್ಕಳಿಗೆ ಈ ವಿಧದ ಚಾಕೊಲೇಟ್ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ.

ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಕ್ಕಳಿಗೆ ಹೇಗೆ ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

ಮಕ್ಕಳಿಗೆ ತುಂಬಾ ಇಷ್ಟವಾಗುವ ಆಹಾರಗಳಲ್ಲಿ ಚಾಕೊಲೇಟ್ ಕೂಡ ಒಂದು. ಇದು ಒಂದು ರೀತಿ, ಅವರ ಕೋಪವನ್ನು ತಣಿಸುವ ಆಯುಧದಂತೆ. ಆದರೆ ಪೋಷಕರು ಮಕ್ಕಳಿಗೆ ಹೆಚ್ಚು ಚಾಕೊಲೇಟ್ ಕೊಡಲು ಭಯಪಡುತ್ತಾರೆ. ಇದರಿಂದ ಹಲ್ಲು ಹುಳುಕಾಗುವುದರ ಜೊತೆಗೆ ಇನ್ನಿತರ ಸಮಸ್ಯೆ ಉಂಟಾಗಬಹುದು ಎಂಬುದು ಪೋಷಕರ ಅಭಿಪ್ರಾಯವಾಗಿರುತ್ತದೆ. ಆದರೆ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ನೀವು ಚಾಕೊಲೇಟ್ ತಿನ್ನುವುದು ಒಳ್ಳೆಯದಲ್ಲ ಎಂದುಕೊಂಡಿದ್ದರೆ ಆ ನಂಬಿಕೆಯನ್ನು ದೂರ ಮಾಡುವಂತಹ ಸುದ್ದಿ ಇಲ್ಲಿದೆ. ಹೌದು, ವಾಸ್ತವವದಲ್ಲಿ ಡಾರ್ಕ್ ಚಾಕೊಲೇಟ್ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ ಅದರಲ್ಲಿಯೂ ಮಕ್ಕಳಿಗೆ ಈ ವಿಧದ ಚಾಕೊಲೇಟ್ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಕ್ಕಳಿಗೆ ಹೇಗೆ ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

*ಮಕ್ಕಳಿಗೆ ಡಾರ್ಕ್ ಚಾಕೊಲೇಟ್ ಹೆಚ್ಚು ಒಳ್ಳೆಯದು ಎನ್ನಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಎಂದರೆ ಇವು ನೈಸರ್ಗಿಕವಾಗಿರುತ್ತವೆ ಹಾಗೂ ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಅಂಶವಿರುವುದಿಲ್ಲ. ಹಾಗಾಗಿ ಇದನ್ನು ಯಾರು ಬೇಕಾದರೂ ಸೇವನೆ ಮಾಡಬಹುದು.

*ಉತ್ತಮವಾದ ಡಾರ್ಕ್ ಚಾಕಲೊಲೇಟ್ ಅನ್ನು ಮಕ್ಕಳಿಗೆ ನೀಡುವುದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಅವರ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಡೋಪಮೈನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಾದ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮಕ್ಕಳ ಒತ್ತಡವೂ ನಿವಾರಣೆಯಾಗುತ್ತದೆ.

*ಡಾರ್ಕ್ ಚಾಕೊಲೇಟ್ ನಲ್ಲಿ ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೆ ಇದರಲ್ಲಿರುವ ಕಬ್ಬಿಣ, ಸತು, ಪೊಟ್ಯಾಸಿಯಮ್‌ಗಳು ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ಡಾರ್ಕ್ ಚಾಕೊಲೇಟ್ ಮಕ್ಕಳ ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಇದು ಸಹಕಾರಿಯಾಗುತ್ತದೆ.

*ಡಾರ್ಕ್ ಚಾಕೊಲೇಟ್ ಅನ್ನು ಒಂದು ರೀತಿಯ ಎನರ್ಜಿ ಬೂಸ್ಟರ್ ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಶಕ್ತಿ ಹೆಚ್ಚುತ್ತದೆ ಜೊತೆಗೆ ದಿನಪೂರ್ತಿ ಮಕ್ಕಳು ಆಕ್ಟಿವ್ ಆಗಿ ಇರಲು ಸಹಾಯ ಮಾಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries