ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ (10 ಕೋಟಿ) ಗಡಿ ದಾಟಿದೆ.
ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ (10 ಕೋಟಿ) ಗಡಿ ದಾಟಿದೆ.
ಕೇಂದ್ರ ಸಚಿವರು, ಬಿಜೆಪಿ ನಾಯಕರು, ಕಾರ್ಯಕರ್ತರು, ಅನೇಕ ಗಣ್ಯರು, ಅಭಿಮಾನಿಗಳು ಮೋದಿ ಅವರ ಈ ಸಾಧನೆಯನ್ನು ಕೊಂಡಾಡಿದ್ದಾರೆ.
ಈ ಬಗ್ಗೆ ಮೋದಿ ಅವರೂ ಸಹ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.
ಈ ಮೂಲಕ ಮೋದಿ ಅವರು ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದವರಲ್ಲಿ ಜಾಗತಿಕವಾಗಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಅವರೇ ನಂಬರ್ 1. ವಿಶೇಷವೆಂದರೆ ಭಾರತದ ಪ್ರಧಾನಿ ಕಚೇರಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವುದರಲ್ಲಿ ಜಾಗತಿಕವಾಗಿ 23 ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ 19 ನೇ ಸ್ಥಾನದಲ್ಲಿದ್ದಾರೆ.
ಜಾಗತಿಕವಾಗಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರು
ಎಲಾನ್ ಮಸ್ಕ್ 188 ಮಿಲಿಯನ್
ಬರಾಕ್ ಒಬಾಮಾ 131ಮಿಲಿಯನ್
ಕ್ರಿಸ್ಟಿಯಾನೊ ರೊನಾಲ್ಡೊ 112 ಮಿಲಿಯನ್
ಜಸ್ಟಿನ್ ಬೀಬರ್ 110 ಮಿಲಿಯನ್
ರಿಹಾನಾ 108 ಮಿಲಿಯನ್
ಕೇಟ್ ಪೆರ್ರಿ 106 ಮಿಲಿಯನ್
ನರೇಂದ್ರ ಮೋದಿ 100 ಮಿಲಿಯನ್
ಟೇಲರ್ ಸ್ವಿಫ್ಟ್ 95 ಮಿಲಿಯನ್
ಡೋನಾಲ್ಡ್ ಟ್ರಂಪ್ 87 ಮಿಲಿಯನ್
ಲೇಡಿ ಗಾಗಾ 83 ಮಿಲಿಯನ್