ಮುಂಬೈ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತು ನಕಲಿ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತು ನಕಲಿ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗದೆ ತೇರ್ಗಡೆಯಾಗಿದ್ದಾರೆ ಎಂದು ಧ್ರುವ ರಾಠಿ ಹೆಸರಿನ ನಕಲಿ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿರ್ಲಾ ಅವರ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆಯ ಅಡಿಯಲ್ಲಿ ಉದ್ದೇಶಪೂರ್ವಕ ಮಾನ ಹಾನಿ ಮತ್ತು ಶಾಂತಿಗೆ ಭಂಗ ತಂದಿರುವ ಆರೋಪದ ಮೇಲೆ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Dhruv Rathee (Parody) @dhruv_rathee ಖಾತೆಯಿಂದ ನಕಲಿ ಪೋಸ್ಟ್ ಮಾಡಲಾಗಿದೆ. ಜತೆಗೆ, ಧ್ರುವ ರಾಠಿಯ @dhruvrahtee ಅಧಿಕೃತ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
'ಇದು ಅಭಿಮಾನಿ ಮತ್ತು ವಿಡಂಬನಾತ್ಮಕ ಖಾತೆಯಾಗಿದೆ ಮತ್ತು ಧ್ರುವ ರಾಠಿ ಅವರ ಮೂಲ ಖಾತೆಯೊಂದಿಗೆ ಸಂಯೋಜಿತವಾಗಿಲ್ಲ. ಯಾರನ್ನೂ ಅನುಕರಿಸುತ್ತಿಲ್ಲ. ಇದು ಅಣಕು ಖಾತೆಯಾಗಿದೆ' ಎಂದು ಖಾತೆಯ ಎಕ್ಸ್ ಬಯೊ ಹೇಳಿಕೊಂಡಿದೆ.
ನಕಲಿ ಖಾತೆಯಿಂದ ಶನಿವಾರ ಇನ್ನೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದ್ದು, 'ಮಹಾರಾಷ್ಟ್ರ ಸೈಬರ್ ಪೊಲೀಸರ ನಿರ್ದೇಶನದಂತೆ ನಾನು ಅಂಜಲಿ ಬಿರ್ಲಾ ಅವರ ಎಲ್ಲಾ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಡಿಲೀಟ್ ಮಾಡಿದ್ದೇನೆ. ನಾನು ಸತ್ಯಾಂಶ ತಿಳಿಯದೆ ಬೇರೊಬ್ಬರ ಟ್ವೀಟ್‌ಗಳನ್ನು ನಕಲಿ ಮಾಡಿ ಪೋಸ್ಟ್ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ' ಎಂದು ಎಂದು ಹೇಳಲಾಗಿದೆ.