HEALTH TIPS

ಮತಾಂತರಗೊ0ಡವರಿಗೆ ಎಸ್ಸಿ ಸ್ಥಾನಮಾನ ಹಾಗೂ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ: ಆರ್.ವಿ. ಬಾಬು

              ಕೊಚ್ಚಿ: ಸಾಮಾಜಿಕವಾಗಿ ಬಹಿಷ್ಕರಿಸಲ್ಪಟ್ಟಿರುವ ಅಸ್ಪೃಶ್ಯರಿಗೆ ಸಂವಿಧಾನವು ಮೀಸಲಾತಿಯನ್ನು ಖಾತರಿಪಡಿಸುತ್ತದೆ ಮತ್ತು ಕ್ರಿಶ್ಚಿಯನ್ ಮತ್ತು ಇಸ್ಲಾಂನಲ್ಲಿ ಯಾವುದೇ ಅಸ್ಪೃಶ್ಯತೆ ಅಥವಾ ಜಾತಿ ತಾರತಮ್ಯ ಇಲ್ಲದಿರುವುದರಿಂದ ಪರಿಶಿಷ್ಟ ಜಾತಿಯಿಂದ ಈ ಧರ್ಮಗಳಿಗೆ ಮತಾಂತರಗೊAಡವರು ಪರಿಶಿಷ್ಟರಿಗೆ ಅರ್ಹರಲ್ಲ ಎಂದು ಎರ್ನಾಕುಳಂ ಕಲೆಕ್ಟರೇಟ್‌ನಲ್ಲಿ ಆಯೋಜಿಸಲಾದ ಮುಖಾಮುಖಿಯಲ್ಲಿ ಪರಿಶಿಷ್ಟ ಜಾತಿ ಆಯೋಗದ ಮುಂದೆ ವಿ.ಎಚ್.ಪಿ. ಹೇಳಿದೆ. ಜಾತಿ ಮೀಸಲಾತಿ ಮತ್ತು ಸ್ಥಾನಮಾನಗಳ ಬಗ್ಗೆ ಅದು ಪುನರ್ಮಿಮರ್ಶೆ ನಡೆಸಿತು.    

                  ಬಾಲಕೃಷ್ಣನ್ ಆಯೋಗದ ಮುಂದೆ ಸಾಕ್ಷ್ಯ ನೀಡುತ್ತಾ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷ ಆರ್.ವಿ.ಬಾಬು ಈ ಬಗ್ಗೆ ಮಾಹಿತಿ ನೀಡಿದರು.

                  ಪರಿಶಿಷ್ಟ ಜಾತಿಯಿಂದ ಮತಾಂತರಗೊ0ಡವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವುದರಿಂದ ಹಿಂದೂ ಧರ್ಮದೊಳಗೆ ಉಳಿದಿರುವ ಪರಿಶಿಷ್ಟ ಜಾತಿಯವರಿಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಇರುವ ಅವಕಾಶ ಇಲ್ಲವಾಗುತ್ತದೆ. ಮತಾಂತರಗೊAಡವರು ಸಂಘಟಿತ ಧರ್ಮದ ಭಾಗವಾಗಿರುವುದರಿಂದ ಸಾಮಾಜಿಕ ಅಸಮಾನತೆಯೊಂದಿಗೆ ಹಿಂದೂಗಳಾಗಿ ಬದುಕುತ್ತಿರುವ ಪರಿಶಿಷ್ಟ ಜಾತಿಯವರನ್ನು ಒತ್ತಡದ ಶಕ್ತಿ ಬಳಸಿ ಅಧಿಕಾರದ ಸ್ಥಾನದಿಂದ ಕೆಳಗಿಳಿಸಲಾಗುವ ಭೀತಿಯಿದೆ ಎಂದು ಬಾಬು ಹೇಳಿದರು. ಸಾಮಾಜಿಕ ನ್ಯಾಯ ಕರ್ಮ ಸಮಿತಿಗೆ ಇ.ಎಸ್. ಬಿಜು ಕೂಡ ಅರ್ಜಿ ಸಲ್ಲಿಸಿದ್ದರು.

                  ಹಿಂದೂ ಐಕ್ಯವೇದಿ ರಾಜ್ಯ ಧರ್ಮದರ್ಶಿ ಪದ್ಮಶ್ರೀ ಆಚಾರ್ಯ ಎಂ.ಕೆ. ಕುಂಜೋಲ್ ಮಾಸ್ತರ್, ಉಪಾಧ್ಯಕ್ಷರುಗಳಾದ ಕೆ.ವಿ.ಶಿವನ್, ಪಿ.ಎಸ್. ಪ್ರಸಾದ್, ಕ್ಯಾಪ್ಟನ್ ಕೆ. ಸುಂದರನ್, ಅಡ್ವ.ಪಿ.ಕೆ. ಚಂದ್ರಶೇಖರನ್, ಜಂಟಿ ಸಂಘಟನಾ ಕಾರ್ಯದರ್ಶಿ ವಿ. ಸುಶಿಕುಮಾರ್, ಜಿಲ್ಲಾ ಪ್ರಮುಖರಾದ ಪಿ.ಸಿ. ಬಾಬು, ಎಂ.ಜಿ. ಗೋವಿಂದನಕುಟ್ಟಿ, ಕೆ.ಎಸ್. ಶಿವಪ್ರಸಾದ್ ಮತ್ತು ಕೇರಳ ಫುಲಯರ್ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಂ.ಟಿ. ವೆಲಾಯಧನ್, ಕೇರಳ ಫುಲಯರ್ ಮಹಾಸಭಾದ ಖಜಾಂಚಿ ಎಂ.ಕೆ. ತಂಕಪ್ಪನ್, ರಾಮವಿಲಾಸಂಚಾವಲರ್ ಸೊಸೈಟಿ ಉಪಾಧ್ಯಕ್ಷ ವಿ.ಕೆ. ಅಶೋಕನ್, ವರ್ಣವರ್ ಸೊಸೈಟಿ ಅಧ್ಯಕ್ಷ ಪಿ.ಇ. ವೇಣುಗೋಪಾಲ್, ಕೇರಳ ವೇಲನ್ ಮಹಾಜನಸಭಾ ಅಧ್ಯಕ್ಷ ಡಿ.ಎಸ್. ಪ್ರಸಾದ್, ಕೇರಳ ವೇಲನ್ ಮಹಾಜನಸಭಾ ಪ್ರಧಾನ ಕಾರ್ಯದರ್ಶಿ ಮಣಿಯನ್, ಕೇರಳ ಸಾಂಬವ ಸಮಾಜದ ಕಾರ್ಯದರ್ಶಿ ಟಿ.ಪಿ. ಗಿರಿ, ಅಖಿಲ ಕೇರಳ ಫುಲಯನ್ ಮಹಾಸಭಾ ಅಧ್ಯಕ್ಷ ಎಂ.ಕೆ. ವಾಸುದೇವನ್, ಅನುಪಾತ ಪ್ರಾತಿನಿಧ್ಯ ಆಂದೋಲನ ಸಭೆಯ ಸಂಯೋಜಕ ಎ.ಜಿ. ಸುಗತನ್, ವೆಟ್ಟುವ ಸರ್ವೀಸ್ ಸೊಸೈಟಿ ಆನಂದನ್, ಭಾರತೀಯ ದಲಿತ ಕಾಂಗ್ರೆಸ್ ಎಂ.ಕೆ. ವೇಲಾಯುಧನ್, ಕೇರಳ ರಾಜ್ಯ ಹರಿಜನ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಂಬೇಡ್ಕರ್, ಕೇರಳ ಕುಂಭರಣ ಸಮುದಾಯ ಸಭಾದ ಅಧ್ಯಕ್ಷ ಪಿ.ಎನ್. ಕುಮಾರನ್, ಡೆಮಾಕ್ರಟಿಕ್ ಪೊಲಿಟಿಕಲ್ ಪಾರ್ಟಿಯ ಇಟಿ. ಕುಮಾರದಾಸ್, ಸ್ವಜನ ಸಮುದಾಯ ಸಭಾದ ಪ್ರ. ಕಾರ್ಯದರ್ಶಿ ಎ.ಎನ್. ರಾಜನ್, ಅಖಿಲ ಭಾರತ ಧೀವರ ಸಮಂತಾ ಸಮಿತಿ ಕಾರ್ಯದರ್ಶಿ ವಿ. ಶಶಿಕುಮಾರ್, ಅಖಿಲ ಭಾರತ ಒಕ್ಕೂಟದ ಎಸ್‌ಸಿಎಸ್‌ಟಿ ಪಿ.ವಿ. ನಟೇಶನ್, ಪರವರ ಸಮುದಾಯದ ಕೆ.ಕೆ. ಸುರೇಶನ್, ಕೇರಳ ಮನ್ನನ್ ಸಭಾ  ಕಾರ್ಯದರ್ಶಿ ಪಿ.ಕೆ. ಗೋಪಿನಾಥ್, ಕೇರಳ ಸಾಂಬವರ್ ಸೊಸೈಟಿ ವಿ. ಅಜಿತ್ ಕುಮಾರ್, ಅನುಪಾತ ಪ್ರಾತಿನಿಧ್ಯ ಆಂದೋಲನ ಸಂಘಟನೆ ಅಧ್ಯಕ್ಷ ಬಿ.ಎಸ್. ಮಾವೋಜಿ ಐಎಎಸ್ (ನಿವೃತ್ತ) ಮುಂತಾದ ಮುಖಂಡರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries