ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕ0ಕೂಡ್ಲು ಇಲ್ಲಿಯ ಪ್ರಸಿದ್ಧ ನಾಗನ ಗುಹಾಸಾನಿಧ್ಯದಲ್ಲಿ ನಾಗರ ಪಂಚಮಿ ಪ್ರಯುಕ್ತ ಶುಕ್ರವಾರ ಸೀಯಾಳ ಅಭಿಷೇಕ, ಹಾಲು ಅಭಿಷೇಕ ಹಾಲು ಪಾಯಸ ಸಮರ್ಪಣೆ, ನಾಗತಂಬಿಲ, ವಾಸುಕೀ ಪೂಜೆ ಮತ್ತು ಮಹಾಪೂಜೆ ಜರಗಿತು.ಊರ ಭಕ್ತ ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.