ನವದೆಹಲಿ: ರದ್ದುಗೊಂಡ ವಿಮಾನದ ಪ್ರಯಾಣಿಕರಿಗೆ ಪರಿಹಾರ ನೀಡದ ಟಾಟಾ ಒಡೆತನದ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.
ನವದೆಹಲಿ: ರದ್ದುಗೊಂಡ ವಿಮಾನದ ಪ್ರಯಾಣಿಕರಿಗೆ ಪರಿಹಾರ ನೀಡದ ಟಾಟಾ ಒಡೆತನದ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.
ಜೂನ್ ತಿಂಗಳಿನಲ್ಲಿ ಡಿಜಿಸಿಎ ನಡೆಸಿದ ನಿಗದಿತ ದೇಶೀಯ ನಿರ್ವಾಹಕರ ವಾರ್ಷಿಕ ಕಣ್ಗಾವಲು ಕಾರ್ಯಕ್ರಮದಲ್ಲಿ ನಡೆಸಿದ ತಪಾಸಣೆ ವೇಳೆ ಪ್ರಯಾಣಿಕರಿಗೆ ಪರಿಹಾರ ಪಾವತಿ ಮಾಡದಿರುವುದು ಪತ್ತೆಯಾಗಿತ್ತು.
ವಿಮಾನಗಳ ರದ್ದತಿಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರವನ್ನು ಒದಗಿಸುವ ನಿಬಂಧನೆಗಳನ್ನು ಅದು ಪಾಲಿಸಿಲ್ಲ ಎಂದು ಏರ್ ಇಂಡಿಯಾದ ಉತ್ತರದಿಂದ ತಿಳಿದುಬಂದಿದೆ ಎಂದು ಡಿಜಿಸಿಎ ಹೇಳಿದೆ.
ಹೀಗಾಗಿ ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಯಾವ ನಿಯಮವನ್ನು ಉಲ್ಲಂಘಿಸಲಾಗಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ.