ನವದೆಹಲಿ: ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 1,037 ಪೊಲೀಸರಿಗೆ ಶೌರ್ಯ ಹಾಗೂ ಸೇವಾ ಪದಕಗಳನ್ನು ಸ್ವಾತಂತ್ರೋತ್ಸವದ ಮುನ್ನಾ ದಿನವಾದ ಬುಧವಾರದಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ನವದೆಹಲಿ: ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 1,037 ಪೊಲೀಸರಿಗೆ ಶೌರ್ಯ ಹಾಗೂ ಸೇವಾ ಪದಕಗಳನ್ನು ಸ್ವಾತಂತ್ರೋತ್ಸವದ ಮುನ್ನಾ ದಿನವಾದ ಬುಧವಾರದಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೃಹ ಸಚಿವಾಲಯವು, 'ರಾಷ್ಟ್ರಪತಿ ಶೌರ್ಯ ಪದಕ (ಪಿಎಂಜಿ) ಒಳಗೊಂಡಂತೆ 214 ಮಂದಿಗೆ ಶೌರ್ಯ ಪದಕ ದೊರೆತಿದೆ.
'94 ಮಂದಿಗೆ ಈ ಬಾರಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿದೆ. ಜೊತೆಗೆ, ಶ್ಲಾಘನೀಯ ಸೇವಾ ಪದಕವನ್ನು 729 ಪೊಲೀಸರಿಗೆ ನೀಡಲಾಗಿದೆ' ಎಂದು ತಿಳಿಸಿದೆ.
ಜನರ ಜೀವ ಹಾಗೂ ಆಸ್ತಿ-ಪಾಸ್ತಿಯ ರಕ್ಷಣೆ, ಅಪರಾಧ ಪತ್ತೆ ಹಾಗೂ ತಡೆಗಾಗಿ, ಜೊತೆಗೆ, ಅಪರಾಧಿಗಳನ್ನು ಬಂಧಿಸಿದ ಶೌರ್ಯಕ್ಕಾಗಿ ಶ್ಲಾಘನೀಯ ಸೇವಾ ಪದಕ ಮತ್ತು ರಾಷ್ಟ್ರಪತಿ ಶೌರ್ಯ ಪದಕವನ್ನು ನೀಡಲಾಗುತ್ತದೆ. ಪೊಲೀಸ್ ಸೇವೆಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಸಾಧಿಸಿರುವುದಕ್ಕೆ ರಾಷ್ಟ್ರಪತಿ ಸೇವಾ ಪದಕವನ್ನು ನೀಡಲಾಗುತ್ತದೆ.