HEALTH TIPS

ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಎಸ್‌. ಸೋಮನಾಥ್‌

           ವದೆಹಲಿ: ಸಣ್ಣ ಉಪ ಗ್ರಹ ಉಡಾವಣಾ ವಾಹನ (ಎಸ್‌ಎಸ್‌ ಎಲ್‌ವಿ) ತಯಾರಿಕೆಯಲ್ಲಿ 10ಕ್ಕೂ ಹೆಚ್ಚು ಕಂಪನಿಗಳು ಮತ್ತು ಸಮೂಹ ಸಂಸ್ಥೆಗಳು ಆಸಕ್ತಿ ತೋರಿವೆ. ಇದರಲ್ಲಿ ಕೆಲವನ್ನು ತಂತ್ರಜ್ಞಾನ ವರ್ಗಾವಣೆಗೆ ಸಂಭಾವ್ಯ ಪಾಲುದಾರರನ್ನಾಗಿ ಪರಿಗಣಿ ಸಲಾಗಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್‌.  ಸೋಮನಾಥ್‌ ಮಂಗಳವಾರ ತಿಳಿಸಿದ್ದಾರೆ.

          ಕೆಳಮಟ್ಟದ ಭೂಕಕ್ಷೆಗಳಲ್ಲಿ ಸಣ್ಣ ಉಪಗ್ರಹಗಳನ್ನು ಇರಿಸಲು, ಸ್ವಂತವಾಗಿ ರಾಕೆಟ್‌ಗಳನ್ನು ನಿರ್ಮಿಸುವ ಸಲುವಾಗಿ ಆಯ್ದ ಉದ್ಯಮ ಪಾಲುದಾರರು ಮೊದಲು ಎರಡು ವರ್ಷಗಳ ಅವಧಿಯಲ್ಲಿ ಇಸ್ರೊ ನೆರವಿನಲ್ಲಿ
               ಎರಡು ಎಸ್‌ಎಸ್‌ಎಲ್‌ವಿಗಳನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಅವರು ಹೇಳಿದರು.

ಎಐಸಿಟಿಇ ಮತ್ತು ಇಸ್ರೊ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 100ಕ್ಕೂ ಹೆಚ್ಚು ಕಂಪನಿಗಳು/ ಸಮೂಹಸಂಸ್ಥೆಗಳು ಎಸ್‌ಎಸ್‌ಎಲ್‌ವಿಗಾಗಿ ತಂತ್ರಜ್ಞಾನ ವರ್ಗಾವಣೆಗೆ ಆಸಕ್ತಿ ತೋರಿಸಿವೆ ಎಂದು ಹೇಳಿದರು.

                ತಂತ್ರಜ್ಞಾನ ವರ್ಗಾವಣೆ ಮತ್ತು ಅದನ್ನು ಹೇಗೆ ಮಾಡುವುದು ಹಾಗೂ ಇಸ್ರೊದಿಂದ ಅವರ ನಿರೀಕ್ಷೆಗಳೇನು ಎನ್ನುವ ಬಗ್ಗೆ ಉದ್ಯಮದ ಪ್ರಮುಖರೊಂದಿಗೆ ಇಸ್ರೊ ಒಂದು ದಿನದ ಸಂವಾದ ಕಾರ್ಯಕ್ರಮ ಕೂಡ ಆಯೋಜಿಸಿದೆ ಎಂದು ಸೋಮನಾಥ್‌ ಹೇಳಿದರು.

ಎಸ್‌ಎಸ್‌ಎಲ್‌ವಿ ತಂತ್ರಜ್ಞಾನದ ವರ್ಗಾವಣೆಗಾಗಿ ಕೆಲವು ಕಂಪನಿಗಳು/ಸಮೂಹಗಳು ಆರ್‌ಎಫ್‌ಪಿ (ಪ್ರಸ್ತಾ ವನೆಯ ಕೋರಿಕೆ) ದಾಖಲೆಗಳನ್ನು ಪಡೆದಿವೆ ಎಂದು ಅವರು ಹೇಳಿದರು.

         ಎಸ್‌ಎಸ್‌ಎಲ್‌ವಿಗಾಗಿ ತಂತ್ರಜ್ಞಾನವನ್ನು ವರ್ಗಾಯಿಸಲು ಗುರುತಿಸಲಾದ ಕಂಪನಿ ಅಥವಾ ಸಮೂಹವು ಉಡಾವಣಾ ವಾಹನಗಳನ್ನು ತಯಾರಿಸಲು ತನ್ನದೇ ಆದ ಕ್ಯಾಂಪಸ್ ಅಭಿವೃದ್ಧಿಪಡಿಸುವವರೆಗೆ ಇಸ್ರೊದ ಸೌಲಭ್ಯಗಳಲ್ಲೇ ರಾಕೆಟ್ ನಿರ್ಮಾಣ ಮುಂದುವರಿಸಬಹುದಾಗಿದೆ. ಕಂಪನಿಗಳ ಉತ್ಪಾದನೆ, ಸೌಲಭ್ಯಗಳು ಮತ್ತು ಆರ್ಥಿಕ ಸಾಮರ್ಥ್ಯ ಸೇರಿದಂತೆ ವಿವಿಧ ಮಾನದಂಡಗಳನ್ನು ನಾವು ಗಮನಿಸುತ್ತೇವೆ. ತಂತ್ರಜ್ಞಾನ ವರ್ಗಾವಣೆ ಶುಲ್ಕವನ್ನು ಅವರು ಪಾವತಿಸಬೇಕು ಎಂದು ಅವರು ಹೇಳಿದರು.

            'ನಾವು ವರ್ಗಾವಣೆ ಮಾಡುತ್ತಿರು ವುದು ಕೇವಲ ಉತ್ಪಾದನಾ ತಂತ್ರಜ್ಞಾನವಲ್ಲ. ಕೆಲಸಗಳನ್ನು ಹೇಗೆ ಮಾಡಬೇಕೆಂಬ ಜ್ಞಾನವನ್ನು ಸಹ ವರ್ಗಾಯಿಸುತ್ತಿದ್ದೇವೆ. ಅವರು ಇಸ್ರೊ ಒಳಗಡೆ ಬಂದು ನಮ್ಮೊಂದಿಗೆ ಕೆಲಸ ಮಾಡಬೇಕು. ತಂತ್ರಗಳನ್ನು ಕಲಿಯಬೇಕು. ನಾವು ಅವರಿಗೆ ರಾಕೆಟ್ ಅನ್ನು ಹೇಗೆ ನಿರ್ಮಿಸಬೇಕೆಂದು ಕಲಿಸುತ್ತೇವೆ' ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries