ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಈ ನಡುವೆ ಕುರ್ಸ್ಕ್ ಸೇರಿದಂತೆ ಇತರೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಹಾರಿಸಿದ್ದ 117 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಮಿಲಿಟರಿ ಹೇಳಿದೆ.

ಕುರ್ಸ್ಕ್ ಪ್ರದೇಶವೊಂದರಲ್ಲೇ ಕ್ಷಿಪಣಿಗಳು ಮತ್ತು 37 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಟೆಲಿಗ್ರಾಂ ಸಂದೇಶದಲ್ಲಿ ತಿಳಿಸಿದೆ.
ಒಟ್ಟಾರೆ ಎಷ್ಟು ಏರ್ ವೆಪನ್‌ಗಳನ್ನು ಉಕ್ರೇನ್ ಹಾರಿಸಿದೆ ಮತ್ತು ಅವುಗಳಲ್ಲಿ ಎಷ್ಟು ರಷ್ಯಾಕ್ಕೆ ಬಡಿದಿವೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಇತ್ತ, ರಾತ್ರೋರಾತ್ರಿ ರಷ್ಯಾ ಹಾರಿಸಿದ್ದ 23 ಡ್ರೋನ್‌ಗಳ ಪೈಕಿ 17 ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ತಿಳಿಸಿದೆ.
ರಷ್ಯಾ ಪಡೆಯು ಎರಡು ಕೆಎಚ್-59/69 ಸಾಮರ್ಥ್ಯದ ಕ್ಷಿಪಣಿಗಳನ್ನೂ ಉಡಾಯಿಸಿದೆ ಎಂದು ಅದು ತಿಳಿಸಿದೆ.
ಉಕ್ರೇನ್‌ನ ವಿವಿಧೆಡೆ ಕಟ್ಟಡಗಳಿಗೆ ಡ್ರೋನ್ ದಾಳಿಯಿಂದ ಹಾನಿಯಾಗಿರುವ ಬಗ್ಗೆ ಸ್ಥಳೀಯ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.