ಕೀವ್: ಉಕ್ರೇನ್‌ನ ಡೊನೆಟ್‌ಸ್ಕ್ ಪ್ರದೇಶದ ಕೊಸ್ತಿಯಾಂತಿನಿವ್‌ಕ ನಗರದ ಶಾಪಿಂಗ್ ಮಾಲ್ ಗುರಿಯಾಗಿಸಿ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದು, ಇತರ 44 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಉಕ್ರೇನ್‌ನ ಸಾವಿರಾರು ಯೋಧರು ತನ್ನ ಗಡಿಯೊಳಗೆ ನುಗ್ಗಿ, ದಾಳಿ ಮಾಡಿರುವುದಕ್ಕೆ ಪ್ರತಿಯಾಗಿ ರಷ್ಯಾ ಈ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.