HEALTH TIPS

ದೇಶದ 12 ಕಡೆಗಳಲ್ಲಿ ಕೈಗಾರಿಕಾ ನಗರಗಳ ಅಭಿವೃದ್ಧಿ: ₹28,602 ಕೋಟಿ ವೆಚ್ಚ

            ವದೆಹಲಿ: ದೇಶದ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ. ಆಂತರಿಕ ಉತ್ಪಾದನೆ ಹೆಚ್ಚಿಸುವ ಗುರಿಯೊಂದಿಗೆ ಅಂದಾಜು ₹ 28,602 ಕೋಟಿ ವೆಚ್ಚದಲ್ಲಿ ಈ ನಗರಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

        'ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಯೋಜನೆಯಡಿ ₹28,602 ಕೋಟಿ ಅಂದಾಜು ವೆಚ್ಚದಲ್ಲಿ 12 ಹೊಸ ಯೋಜನೆಗಳ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ' ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

12 ನಗರಗಳ ಪೈಕಿ 2 ಆಂಧ್ರಪ್ರದೇಶ ಹಾಗೂ 1 ಬಿಹಾರದ ನಗರಗಳು ಸೇರಿವೆ.

           ಒಟ್ಟು ಆರು ಕಾರಿಡಾರ್‌ಗಳಲ್ಲಿ ಈ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

         ಖುರ್ಪಿಯಾ (ಉತ್ತರಾಖಂಡ), ರಾಜ್‌ಪುರ-ಪಟಿಯಾಲ (ಪಂಜಾಬ್), ಡಿಘಿ (ಮಹಾರಾಷ್ಟ್ರ), ಪಾಲಕ್ಕಾಡ್ (ಕೇರಳ), ಆಗ್ರಾ, ಪ್ರಯಾಗರಾಜ್ (ಉತ್ತರ ಪ್ರದೇಶ), ಗಯಾ ಬಜಾರ್ (ಬಿಹಾರ), ಝಹಿರಾಬಾದ್‌ (ತೆಲಂಗಾಣ), ಓರ್ವಕಲ್‌, ಕೊ‍ಪ್ಪಾರ್ತಿ (ಆಂಧ್ರ‍ಪ್ರದೇಶ) ಹಾಗೂ ಜೋಧ್‌ಪುರ-ಪಾಲಿಯನ್ನು (ರಾಜಸ್ಥಾನ) ಕೈಗಾರಿಕಾ ನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು.

ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಇವುಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ವೈಷ್ಣವ್ ತಿಳಿಸಿದರು.

             ಈ ನಗರಗಳಲ್ಲಿ ಕೈಗಾರಿಕೆಗಳ ಸಮರ್ಥ ಕಾರ್ಯಾಚರಣೆಗೆ ಅತ್ಯಾಧುನಿಕ ಮೂಲಭೂತ ಸೌಕರ್ಯ ಇರಲಿದೆ. 10 ಲಕ್ಷ ನೇರ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಠಿಯಾಗಲಿವೆ. ಈ ಯೋಜನೆಗಳು ಸುಮಾರು ₹ 1.52 ಲಕ್ಷ ಕೋಟಿ ಹೂಡಿಕೆ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries