ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಖಾಲಿಯಿರುವ ಅರ್ಥಶಾಸ್ತ್ರ (ಸೀನಿಯರ್) ಶಿಕ್ಷಕ ಹುದ್ದೆಗೆ ದಿನ ವೇತನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಆ.12ರಂದು ಬೆಳಗ್ಗೆ 10.30ಕ್ಕೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ.