ಕುಂಬಳೆ: ಆನ್‍ಲೈನ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ವಂಚಕನೊಬ್ಬ ಕುಂಬಳೆ ನಿವಾಸಿಯಿಂದ ಭರೋಬ್ಬರಿ 1.30ಲಕ್ಷ ರೂ. ದೋಚಿದ್ದಾನೆ. ಕುಂಬಲೆ ಬದ್ರಿಯಾನಗರ ನಿವಾಸಿ ಅಬ್ದುಲ್ ಮಿಶಾಲ್ ಹಣ ಕಳೆದುಕೊಂಡವರು. ತಿರುವನಂತಪುರ ನಿವಾಸಿ ಆನಂದ್ ವಿಸ್ಮಯ ಎಂಬಾತ, ಟೈಟಾನ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಲಭಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ 2023 ಡಿ. 13 ಹಾಗೂ 14ರಂದು 1.30ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ಇದೀಗ ಹಣ ವಾಪಾಸುಮಾಡದೆ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.