178 ಶವಗಳನ್ನು ಗುರುತಿಸಲಾಗಿದೆ. 51 ಶವಗಳನ್ನು ಗುರುತಿಸಲಾಗಿಲ್ಲ ಮತ್ತು 130 ಜನರು ಕಾಣೆಯಾಗಿದ್ದಾರೆ. ಶವ ಅಥವಾ ದೇಹದ ಭಾಗಗಳನ್ನು ಪಡೆಯಲು ರಕ್ಷಣಾ ತಂಡವು ಪ್ರಯತ್ನಿಸುತ್ತಿದೆ. ಇಂದು ಮೂರು ದೇಹದ ಭಾಗಗಳನ್ನು ಹೊರತೆಗೆದಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರ, ಅವು ಮನುಷ್ಯರಿಗೆ ಸೇರಿದ್ದ ಅಥವಾ ಪ್ರಾಣಿಗಳಿಗೆ ಸೇರಿದ್ದವ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ರಿಯಾಸ್ ಎಎನ್‌ಐಗೆ ತಿಳಿಸಿದರು.
ಅಟ್ಟಮಲದಿಂದ ಮೂಳೆ ಸಿಕ್ಕಿದೆ. ಶಿಬಿರದಲ್ಲಿ 18 ತಂಡಗಳೊಂದಿಗೆ ಸಮೀಕ್ಷೆ ನಡೆಸುತ್ತಿದ್ದೇವೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಲ್ಲದೆ, ವಿವಿಧ ಸೇವಾ ಮತ್ತು ಯುವ ಸಂಘಟನೆಗಳ ಸ್ವಯಂಸೇವಕರು, ಭೂಕುಸಿತದಿಂದ ಬದುಕುಳಿದವರು ಮತ್ತು ಸಂತ್ರಸ್ತರ ಸಂಬಂಧಿಕರು ಇನ್ನೂ ಕಾಣೆಯಾದವರ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.