ಕಾಸರಗೋಡು: ನಾಗರಿಕ ಪೂರೈಕೆ ಇಲಾಖೆ ಅದಿನದಲ್ಲಿ ಕಾರ್ಯಾಚರಿಸುತ್ತಿರುವ ಸಪ್ಲೈಕೋ ಸಂಸ್ಥೆಯ ಐವತ್ತನೇ ವರ್ಷಾಚರಣೆ ಅಂಗವಾಗಿ ದರಕಡಿತದ ಮಾರಾಟ ಮೇಳ'ಫಿಪ್ಟಿ-ಫಿಪ್ಟಿ ಹ್ಯಾಪಿ ಅವರ್'ಕೊಡುಗೆ ಆ. 13ರ ವರೆಗೆ ನಡೆಯಲಿದೆ. ಜೂನ್ 25ರಿಂದ ಆರಂಭಿಸಲಾಗಿದೆ.
ಮಧ್ಯಾಹ್ನ 2 ರಿಂದ 3 ರವರೆಗೆ ಸಪ್ಲೈಕೋ ಸೂಪರ್‍ರ್ಮಾರ್ಕೆಟ್, ಹೈಪರ್‍ರ್ಮಾರ್ಕೆಟ್ ಮತ್ತು ಪೀಪಲ್ಸ್ ಬಜಾರ್‍ನಿಂದ ಸಬ್ಸಿಡಿ ರಹಿತಹ್ಯಾಪಿ ಅವರ್ಸ್ ಎನ್ನುವುದು ಖರೀದಿ ಮಾಡುವ ಗ್ರಾಹಕರಿಗೆ ಬಿಲ್ ಮೊತ್ತದಲ್ಲಿ 10% ರಿಯಾಯಿತಿ ನೀಡುವ ಯೋಜನೆ ಇದಾಗಿದೆ. ಹ್ಯಾಪಿ ಅವರ್ಸ್‍ನ 10% ರಿಯಾಯಿತಿಯು ಅಸ್ತಿತ್ವದಲ್ಲಿರುವ ರಿಯಾಯಿತಿಗಳಿಗೆ ಹೆಚ್ಚುವರಿಯಾಗಿ ಲಭಿಸಲಿದೆ.
ಫಿಫ್ಟಿ-ಫಿಫ್ಟಿ ಯೋಜನೆಯು ಸಪ್ಲೈಕೋದ ಸ್ವಂತ ಬ್ರಾಂಡ್ ಶಬರಿ ಉತ್ಪನ್ನಗಳು ಮತ್ತು ಇತರ ಗ್ರಾಹಕ ಸರಕುಗಳು ಸೇರಿದಂತೆ 50 ಜನಪ್ರಿಯ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಮತ್ತು ವಿಶೇಷ ಕೊಡುಗೆಗಳನ್ನು ಹೊಂದಿದೆ. 300ರೂ. ಬೆಲೆಯ ಶಬರಿ ಹೋಟೆಲ್ ಬ್ಲೆಂಡ್ ಟೀ ಕೆಜಿಗೆ 270, ರೂ250 ಗ್ರಾಂ ಶಬರಿ ಚಹಾವನ್ನು ಉಚಿತವಾಗಿ ನೀಡಲಾಗುವುದು. 80 ಬೆಲೆಯ 250 ಗ್ರಾಂ ಶಬರಿ ಗೋಲ್ಡ್ ಟೀ 64 ರೂ.ಗೆ ಮಾರಾಟವಾಗಲಿದೆ. 60 ರೂಪಾಯಿ ಮೌಲ್ಯದ ಶಬರಿ ತಾಜಾ ಆಟ್ಟ ಶೇ.20ರಿಯಾಯತಿಯಲ್ಲಿ 48 ರೂಪಾಯಿಗಳಲ್ಲಿ ನೀಡಲಾಗುವುದು, 79 ರೂಪಾಯಿಗಳ ಶಬರಿ ಅಪ್ಪಂ ಪೆÇಡಿ ಮತ್ತು ಪುಟ್ಟುಪೆÇಡಿಯನ್ನು 50 ದಿನಗಳವರೆಗೆ ಕೆಜಿಗೆ 63.20 ರೂಪಾಯಿಗಳಿಗೆ ನೀಡಲಾಗುವುದು. ಶಬರಿ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಚಿಕನ್ ಮಸಾಲಾ, ಸಾಂಬಾರ್ ಪುಡಿ ಮತ್ತು ಸಾಸಿವೆ ಸಹ ಶೇ.25 ರವರೆಗೆ ರಿಯಾಯಿತಿ ಇರಲಿದೆ. 500 ಗ್ರಾಂ ರಿಪ್ಪಲ್ ಪ್ರೀಮಿಯಂ ಡಸ್ಟ್‍ಚಹಾದೊಂದಿಗೆ 500 ಗ್ರಾಂ ಸಕ್ಕರೆಯನ್ನು ನೀಡಲಾಗುತ್ತದೆ. ಉಜಾಲಾ, ಹೆಂಕೊ, ಸನ್ ಪ್ಲಸ್ ಮುಂತಾದ ವಿವಿಧ ಬ್ರಾಂಡ್‍ಗಳ ವಾಷಿಂಗ್ ಪೌಡರ್‍ಗಳು ಮತ್ತು ಡಿಟಜೆರ್ಂಟ್‍ಗಳ ರಿಯಾಯಿತಿ ಮಾರಾಟ ಇರಲಿದೆ. ಬ್ರಾಂಡ್ ತುಪ್ಪ ಜೇನುತುಪ್ಪ, ಎಳ್ಳೆಣ್ಣೆ, ಚಂದ್ರಿಕಾ, ಸಂತೂರ್ ಬ್ರಾಂಡ್ಸ್ ಸೋಪ್, ನಿರಪರ, ಬ್ರಾಹ್ಮನ್ಸ್ ಬ್ರಾಂಡ್ಸ್ ಮಸಾಲಾ ಪೌಡರ್ಸ್, ಬ್ರಾಂಡ್ ಅಪ್ಪಂ ಪೌಡರ್, ರವಾ, ಪಾಲಾಡ್ ಮಿಕ್ಸ್, ಕೆಲ್ಲಾಗ್ಸ್ ಓಟ್ಸ್, ಐಟಿಸಿ ಆಶೀರ್ವಾದ ಅಟ್ಟಾ, ಐಟಿಸಿಯ ಸ್ವಂತ ಸನ್ ಫೀಸ್ಟ್‍ನೂಡಲ್ಸ್, ಮಾಮ್ಸ್ ಮ್ಯಾಜಿಕ್, ಸನ್ ಫೀಸ್ಟ್ ಬಿಸ್ಕೆಟ್‍ಗಳು, ಡಾಬರ್‍ನ ಹನಿ, ಬ್ರಿಟಾನಿಯಾ ಬ್ರಾಂಡ್ ಡೈರಿ ವೈಟ್‍ನರ್ ಮತ್ತು ಕೋಲ್ಗೇಟ್ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಮತ್ತು ಕೊಡುಗೆ ಇರಲಿರುವುದಾಘಿ ಪ್ರಕಟಣೆ ತಿಳಿಸಿದೆ.