ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ 13ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆ ಮೀಯಪದವು ಶಾಲಾ ಮೈದಾನದಲ್ಲಿ ಸೋಮವಾರ ಜರಗಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಗೌರವಾಧ್ಯಕ್ಷ ಕೆ.ವಿ ರಾಧಾಕೃಷ್ಣ ಭಟ್ ವಹಿಸಿ ಶುಭ ಹಾರೈಸಿದರು. ನಿವೃತ್ತ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್ ದೀಪ ಬೆಳಗಿಸಿ, ಉದ್ಘಾಟಿಸಿದರು. ಕ್ಲಬ್ ನ ಗೌರವ ಸಲಹೆಗಾರ ಜನಾರ್ಧನ್ ಎಸ್, ಅಧ್ಯಕ್ಷ ಕೃಷ್ಣ ಪ್ರಸನ್ನ ಹಾಗೂ ಪ್ರಧಾನ ಕಾರ್ಯದರ್ಶಿ ರವಿಶಂಕರ್ ರಾವ್ ಉಪಸ್ಥಿತರಿದ್ದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ರಘುವೀರ್ ರಾವ್ ವಂದಿಸಿದರು. ಕಿರಣ್ ಭಟ್ ನಿರೂಪಿಸಿದರು.
ಬಳಿಕ ವಿವಿಧ ಆಟೋಟ, ಸಾಂಸ್ಕøತಿಕ, ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಶ್ರೀಕೃಷ್ಣ ವೇಷ ನೃತ್ಯ ಸ್ಪರ್ಧೆಗಳು ಜರಗಿದವು. ಸಂಜೆ ಶ್ರೀಕೃಷ್ಣ ವೇಷ ಮೆರವಣಿಗೆ, ಶ್ರೀಮೊಗೇರ ದೈವ ಕ್ಷೇತ್ರದಿಂದ ಹೊರಟು ಶಾಲಾ ಮೈದಾನದವರೆಗೆ ಶ್ರೀ ಮಹಾಲಿಂಗೇಶ್ವರ ಮಕ್ಕಳ ಕುಣಿತ ಭಜನೆಯೊಂದಿಗೆ ನಡೆಯಿತು.