HEALTH TIPS

ಆಗಸ್ಟ್ 15ರಂದು ರಾಷ್ಟ್ರೀಯ ಶೋಕ ದಿನ ಆಚರಿಸಿ: ಬಾಂಗ್ಲಾ ಜನರಿಗೆ ಶೇಖ್ ಹಸೀನಾ ಕರೆ

 ವದೆಹಲಿ: ಮಧ್ಯಂತರ ಸರ್ಕಾರದ ವಿರೋಧ ನಡುವೆಯೂ, ಆಗಸ್ಟ್ 15 ರಂದು 'ರಾಷ್ಟ್ರೀಯ ಶೋಕ ದಿನ' ಆಚರಿಸುವಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಕರೆ ನೀಡಿದ್ದಾರೆ.

ಹಸೀನಾ ರಾಜೀನಾಮೆ ಬಳಿಕ ರಚನೆಯಾಗಿರುವ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಅವರು 'ರಾಷ್ಟ್ರೀಯ ಶೋಕ ದಿನ'ದಂದು ಸಾರ್ವಜನಿಕ ರಜೆ ರದ್ದು ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ವಿವಾದಿತ ಮೀಸಲಾತಿ ವಿರುದ್ಧ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಹುದ್ದೆಗೆ (ಆಗಸ್ಟ್‌ 5 ರಂದು) ರಾಜೀನಾಮೆ ನೀಡಿ ದೇಶದಿಂದ ಪಲಾಯನಗೈದಿರುವ ಹಸೀನಾ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

'ಪ್ರತಿಯೊಬ್ಬರೂ ಆಗಸ್ಟ್‌ 15ರಂದು ಶ್ರದ್ಧಾ ಪೂರ್ವಕವಾಗಿ ಹಾಗೂ ಗೌರವದಿಂದ ರಾಷ್ಟ್ರೀಯ ಶೋಕ ದಿನನ್ನಾಗಿ ಆಚರಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ಹಸೀನಾ ಹೇಳಿರುವುದಾಗಿ ಅವರ ಮಗ ಸಜೀದ್‌ ವಾಜೆದ್‌ ಜಾಯ್‌ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಬರೆದುಕೊಂಡಿದ್ದಾರೆ.


ಮಧ್ಯಂತರ ಸರ್ಕಾರದ ವಿರುದ್ಧ ಕಿಡಿಕಾರಿರುವ ಹಸಿನಾ, ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ಸೃಷ್ಟಿಸಿದವರು, ದೇಶದಾದ್ಯಂತ ಬೆಂಕಿ ಹಚ್ಚಿದವರು ಹಾಗೂ ಕೊಲೆಗಳು ನಡೆಯಲು ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯ ಅವರು ಭಾರತದ ಯಾವ ಸ್ಥಳದಲ್ಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

ಬಾಂಗ್ಲಾದೇಶ ಸಂಸ್ಥಾಪಕ ಹಾಗೂ ಹಸೀನಾ ಅವರ ತಂದೆ ಬಂಗಬಂಧು ಶೇಖ್‌ ಮುಜಿಬುರ್ ರಹಮಾನ್‌ ಅವರ ಮೇಲೆ ಢಾಕಾದಲ್ಲಿನ ನಿವಾಸದಲ್ಲಿ 1975ರ ಆಗಸ್ಟ್‌ 15ರಂದು ಸೇನಾ ಸಿಬ್ಬಂದಿಯೇ ದಾಳಿ ಮಾಡಿದ್ದರು. ಆ ವೇಳೆ ರಹಮಾನ್‌ ಮಾತ್ರವಲ್ಲದೆ, ಅವರ ಕುಟುಂಬದ ಬಹುತೇಕರು ಹತ್ಯೆಯಾಗಿದ್ದರು. ಹಸೀನಾ ಮತ್ತು ಅವರ ಸಹೋದರಿ ಶೇಖ್‌ ರೆಹಾನಾ ಅವರು ಜರ್ಮನಿ ಪ್ರವಾಸಕ್ಕೆ ಹೋಗಿದ್ದರಿಂದ ಬದುಕುಳಿದಿದ್ದರು.

ರಹಮಾನ್‌ ಹತ್ಯೆಯ ಸ್ಮರಣಾರ್ಥ ಬಾಂಗ್ಲಾದೇಶದಲ್ಲಿ ಆಗಸ್ಟ್‌ 15 ಅನ್ನು 'ರಾಷ್ಟ್ರೀಯ ಶೋಕ ದಿನ'ವಾಗಿ ಆಚರಿಸಲಾಗುತ್ತಿದೆ. ರಹಮಾನ್‌ ಹತ್ಯೆಯಾದ ನಿವಾಸವನ್ನು 'ಬಂಗಬಂಧು ಮ್ಯೂಸಿಯಂ' ಆಗಿ ರೂಪಿಸಲಾಗಿದೆ. ರಹಮಾನ್‌ ಅವರು 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವ ವಹಿಸಿದ್ದರು.

'ಬಂಗಬಂಧು ಮ್ಯೂಸಿಯಂ' ಅನ್ನು ಪ್ರತಿಭಟನಾಕಾರರು ಆಗಸ್ಟ್ 5ರಂದು ಧ್ವಂಸ ಮಾಡಿದ್ದಾರೆ.

'ಫ್ಯಾಸಿಸಂ ಪ್ರತೀಕ'
ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಸರ್ಕಾರದ ಪತನಕ್ಕೆ ಕಾರಣವಾದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಸಂಘಟನೆಗಳು 'ರಾಷ್ಟ್ರೀಯ ಶೋಕ ದಿನಾಚರಣೆ'ಯನ್ನು ನಿಲ್ಲಿಸಲು ತೀರ್ಮಾನಿಸಿವೆ. ಆಗಸ್ಟ್‌ 15ರ ಆಚರಣೆಯು ಅವಾಮಿ ಲೀಗ್‌ ಪಕ್ಷದ 'ರಾಜಕೀಯ ಮತ್ತು ಫ್ಯಾಸಿಸಂ (ನಿರಂಕುಶ ಪ್ರಭುತ್ವ) ಸಂಸ್ಕೃತಿಯ ಪ್ರತೀಕ' ಎಂದು ಕಿಡಿಕಾರಿವೆ.

ಮಧ್ಯಂತರ ಸರ್ಕಾರವು ರಾಷ್ಟ್ರೀಯ ಶೋಕಾಚರಣೆಯನ್ನು ವಿರೋಧಿಸಿದೆ. ಹೀಗಾಗಿ, ಸಾರ್ವಜನಿಕ ರಜೆ ರದ್ದು ಮಾಡಿದೆ. ಗೃಹ ವ್ಯವಹಾರಗಳ ಸಲಹೆಗಾರ ನಿವೃತ್ತ ಬ್ರಿಗೇಡಿಯರ್‌ ಜನರಲ್‌ ಎಂ. ಸಖಾವತ್ ಹೊಸೈನ್ ಅವರು, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಆಗಸ್ಟ್ 15 ರಂದು ಗಮನಾರ್ಹ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಹಸೀನಾ ವಿರುದ್ಧ ತನಿಖೆಗೆ ಆದೇಶ
ಜುಲೈ 19 ರಂದು ಸಂಜೆ 4 ಗಂಟೆಗೆ ಢಾಕಾದ ಮೊಹಮ್ಮದ್‌ಪುರ ಪ್ರದೇಶದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಇದೇ ವೇಳೆ ರಸ್ತೆ ದಾಟುತ್ತಿದ್ದ ಕಿರಾಣಿ ಅಂಗಡಿ ಮಾಲೀಕ ಅಬು ಸೈಯದ್ ಎಂಬವರಿಗೆ ಗುಂಡು ತಗುಲಿ ಮೃಪಟ್ಟಿದ್ದರು.

ಈ ಪ್ರಕರಣದಲ್ಲಿ ಹಸೀನಾ ಅವರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರವಷ್ಟೇ ಆದೇಶಿಸಿದೆ.

ಹಿಂಸಾಚಾರವನ್ನು ಹತ್ತಿಕ್ಕಲು ಹಸೀನಾ ಅವರು ಕಠಿಣ ಕ್ರಮಕ್ಕೆ ಕರೆ ನೀಡಿದ್ದು, ಘಟನೆಗೆ ಕಾರಣ ಎಂದು ಆರೋಪಿಸಿ ಸೈಯದ್ ಅವರ ಹಿತೈಷಿ ಅಮೀರ್ ಹಮ್ಜಾ ಎಂಬುವವರು ಕೊಲೆ ಪ್ರಕರಣ ದಾಖಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries