ಕಾಸರಗೋಡು: 'ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕøತಿ ಸಮ್ಮೇಳನ-2024' ಸೆ. 15ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸಭಾಂಗಣದಲ್ಲಿ ಜರುಗಲಿದೆ. ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವರು. ಈ ಸಂದರ್ಭ ಕೃತಿ ಬಿಡುಗಡೆ, ಶಿಕ್ಷಣ-ಕೃಷಿ ವಿಚಾರಗೋಷ್ಠಿ, ಸಂವಾದ, ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ, ಸಾಂಸ್ಕøಥಿಕ ಕಾರ್ಯಖ್ರಮ ನಡೆಯುವುದು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಯುವುದು. ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ. ಮಾನಸಾ ಸಮಾರಂಭ ಉದ್ಘಾಟಿಸುವರು. ಸಾಹಿತಿ, ಸಮ್ಮೇಳನಸರ್ವಾಧ್ಯಕ್ಷ ವಿ.ಬಿ ಕುಳಮರ್ವ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸಉಬ್ಬಯ್ಯಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ ಕೃತಿ ಬಿಡುಗಡೆಗೊಳಿಸುವರು. ಶಿಕ್ಷಕಿ ಕೆ.ಟಿ ಶ್ರೀಮತಿ, ಶಿಕ್ಷಕ, ಯಕ್ಷಗಾನ ಕಲಾವಿದ ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ, ಸಿರಿ ವಏದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪಾಲ್ಗೊಳ್ಳುವರು.
ಈ ಸಂದರ್ಭ ನಡೆಯುವ ಶೈಕ್ಷಣಿಕ ವಿಚಾರಗೋಷ್ಠಿಯಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸುವರು. ಕಸಾಪ ಕೇರಳ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಿಚಾರ ಮಂಡಿಸುವರು. ನಂತರ ನಡೆಯುವ ಕೃಷಿ ವಿಚಾರ ಸಂಕಿರಣದಲ್ಲಿ ಕೃಷಿ ಅಭಿವೃದ್ಧಿಯಲ್ಲಿ ಕೃಷಿಕರು ಹಾಗೂ ಗ್ರಾಹಕರ ಪಾತ್ರ ವಿಷಯದಲ್ಲಿ ಮಂಗಳೂರು ಆಕಾಶವಾಣಿಯ ಡಾ. ಪಿ.ಎಸ್ ಸೂರ್ಯನಾರಾಯಣ ಭಟ್ ವಿಚಾರ ಮಂಡಿಸುವರು. ಪ್ರಗತಿಪರ ಕೃಷಿಕ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಕೃಷಿಕರು ಸಂವಾದದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭ ನಡೆಯುವ ಕವಿಗೋಷ್ಠಿಯಲ್ಲಿ ವಿರಾಜ್ ಅಡೂರು ಅಧ್ಯಕ್ಷತೆ ವಹಿಸುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸ್ಪಂದನ ಸಿರಿ ವೇದಿಕೆ ರಾಜ್ಯಾಧ್ಯಕ್ಷೆಜಿ.ಎಸ್ ಕಲಾವತೀ ಮಧುಸೂದನ್ ಅಧ್ಯಕ್ಷತೆ ವಹಿಸುವರು. ಸಂಘಟನೆ ಹಾಸನ ಜಿಲ್ಲಾ ಕಾರ್ಯದರ್ಶಿ ಸುಂದರೇಶ್ ಡಿ. ಉಡುವೆರೆ ಸಮಾರೋಪ ಭಾಷಣ ಮಾಡುವರು. ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಗಾನ ನೃತ್ಯ ವೈಭವ, ಗೀತಾ ವೈವಿಧ್ಯ ನಡೆಯುವುದು.