ಜೈಪುರ: ಭಾರತ-ಪಾಕಿಸ್ತಾನದ ಗಡಿಭಾಗವಾಗಿರುವ ರಾಜಸ್ಥಾನದ ಅನುಪ್‌ಗಢ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿ ₹15 ಕೋಟಿ ಮೌಲ್ಯದ ಹೆರಾಯಿನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

'30ಎಪಿಡಿ ಗ್ರಾಮದ ನಿವಾಸಿ ಕಲುರಾಮ್ ನಾಯಕ್ ಅವರು ಹೊಲಕ್ಕೆ ಹೋದಾಗ ಡ್ರೋನ್ ಅನ್ನು ಗಮನಿಸಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇಂದು ಬೆಳ್ಳಿಗೆ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್ ಸೈನಿಕರು 3 ಕೆ.ಜಿ ತೂಕದ ಹೆರಾಯಿನ್ ಪ್ಯಾಕೇಟ್ ವಶಪಡಿಸಿಕೊಂಡಿದ್ದಾರೆ' ಎಂದು ಸ್ಥಳೀಯ ಎಸ್‌ಎಚ್‌ಒ ಅನಿಲ್ ಕುಮಾರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಪಾಕಿಸ್ತಾನದಿಂದ ಡ್ರೋನ್ ಮೂಲಕ ಹೆರಾಯಿನ್ ಸೇರಿದಂತೆ ಇತರೆ ವಸ್ತುಗಳನ್ನು ಭಾರತಕ್ಕೆ ರವಾನಿಸುತ್ತಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಜುಲೈ 24ರಂದು ಅನುಪ್‌ಗಢ ಜಿಲ್ಲೆಯ ಜಮೀನೊಂದರಲ್ಲಿ ₹20 ಕೋಟಿ ಮೌಲ್ಯದ ಹೆರಾಯಿನ್ ಅನ್ನು ಗಡಿ ಭದ್ರತಾ ಪಡೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಜೂನ್ 15ರಂದು ಪಂಜಾಬ್‌ನ ಅಮೃತ್‌ಸರದ ಬಳಿ ಗಡಿ ಭದ್ರತಾ ಪಡೆಯು ಡ್ರೋನ್ ಮತ್ತು ಹೆರಾಯಿನ್ ಅನ್ನು ಜಪ್ತಿ ಮಾಡಿತ್ತು. ಕಾರ್ಯಾಚರಣೆ ವೇಳೆ ಕಹಾನ್‌ಗರ್ ಗ್ರಾಮದಲ್ಲಿ ಚೀನಾ ನಿರ್ಮಿತ ಡ್ರೋನ್ ಮತ್ತು 557 ಗ್ರಾಂ ಹೆರಾಯಿನ್ ತುಂಬಿದ್ದ ಪೊಟ್ಟಣವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.