ಕಾಸರಗೋಡು: ವಿದೇಶದಲ್ಲಿ ಉದ್ಯೋಗ ವಿಸಾ ದೊರಕಿಸಿಕೊಡುವುದಾಗಿ 15ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಕಲ್ಲೂರ್ ಶ್ರೀಪದ್ಮಾ ಅಪಾರ್ಟ್‍ಮೆಂಟ್‍ನಲ್ಲಿ ವಆಸಿಸುವ ರಾಜೇಂದ್ರನ್ ಎಂಬಾತನ ವಿರುದ್ಧ ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ರಾಜಾಪುರಂ ಕೊಟ್ಟೋಡಿ ಪಾಲಪುಲಿಯಿಲ್ ನಿವಾಸಿ ಕೆ.ಜೆ ರಾಜೇಶ್ ನೀಡಿದ ದಊರಿನನ್ವಯ ಈ ಕೇಸು ದಾಖಲಾಗಿದೆ. ಪೋಲೆಂಡ್‍ನಲ್ಲಿ ತನಗೆ ಹಾಗೂ ಸಹೋದರಿ ಪತಿಗೆ ಉದ್ಯೋಗ ವಿಸಾ ದೊರಕಿಸಿಕೊಡುವುದಾಗಿ 15ಲಕ್ಷ ರೂ. ಅಲ್ಲದೆ ತನ್ನ ಎಸ್ಸೆಸೆಲ್ಸಿ ಮಾರ್ಕ್ ಕಾರ್ಡು ಹಾಗೂ ಪಾಸ್‍ಪೋರ್ಟ್ ಪಡೆದುಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.