ಭಾರತದ ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಜೆ ಹೊಂದಿರುತ್ತವೆ. 2024ರಲ್ಲಿ ಷೇರು ಮಾರುಕಟ್ಟೆಗೆ ಇರುವ 14 ಅಧಿಕೃತ ರಜೆಗಳಲ್ಲಿ ಇದೂ ಒಂದು. ಇದರ ಬಳಿಕ ಗಾಂಧಿ ಜಯಂತಿ, ಗುರುನಾನಕ್ ಜಯಂತಿ, ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳಿಗೆ ಷೇರು ಮಾರುಕಟ್ಟೆ ರಜೆ ಹೊಂದಿರುತ್ತದೆ.
ನವದೆಹಲಿ, ಆಗಸ್ಟ್ 14: ನಾಳೆ ಗುರುವಾರ (ಆ. 15) ಸ್ವಾತಂತ್ರ್ಯ ದಿನಾಚರಣೆ ಇದೆ. ಭಾರತದ ಷೇರು ಮಾರುಕಟ್ಟೆಗೆ ಅಂದು ರಜೆ ಇದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎರಡೂ ಕೂಡ ಬಂದ್ ಆಗಿರಲಿವೆ. ಷೇರು ಮಾರುಕಟ್ಟೆಯ ಕೆಲವೇ ರಜಾ ದಿನಗಳಲ್ಲಿ ಆಗಸ್ಟ್ 15ರದ್ದೂ ಒಂದು. 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 14 ಸಾರ್ವತ್ರಿಕ ರಜಾ ದಿನಗಳು ಷೇರುಪೇಟೆಗೆ ಇವೆ. ಈ ಆಗಸ್ಟ್ ತಿಂಗಳಲ್ಲಿ ಇದೊಂದೇ ರಜೆ ಇರುವುದು. ಸೆಪ್ಟಂಬರ್ನಲ್ಲಿ ಯಾವ ರಜೆಯೂ ಇಲ್ಲ. ನಂತರ ರಜೆ ಸಿಗುವುದು ಅಕ್ಟೋಬರ್ ತಿಂಗಳಲ್ಲಿ, ನವೆಂಬರ್ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ.
ಷೇರು ಮಾರುಕಟೆಯಲ್ಲಿ ಡಿಸೆಂಬರ್ 31ರವರೆಗೂ ಇರುವ ರಜಾ ದಿನಗಳು
- ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
- ಅಕ್ಟೋಬರ್ 2: ಗಾಂಧಿ ಜಯಂತಿ
- ನವೆಂಬರ್ 1: ದೀಪಾವಳಿ
- ನವೆಂಬರ್ 15: ಗುರುನಾನಕ್ ಜಯಂತಿ
- ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ
ಈ ಮೇಲಿನವು ಸಾರ್ವತ್ರಿಕ ರಜಾ ದಿನಗಳು. ಇವುಗಳ ಜೊತೆಗೆ ಪ್ರತೀ ವಾರ ಶನಿವಾರ ಮತ್ತು ಭಾನುವಾರ ದಿನಗಳಂದು ಷೇರು ಮಾರುಕಟ್ಟೆಯಲ್ಲಿ ವ್ಯವಹಾರಗಳು ನಡೆಯುವುದಿಲ್ಲ.
ಹೊಯ್ದಾಡುತ್ತಿರುವ ಷೇರು ಮಾರುಕಟ್ಟೆ
ಲೋಕಸಭಾ ಚುನಾವಣೆಯ ಫಲಿತಾಂಶ ಬಂದಂದಿನಿಂದ ಭಾರತದ ಷೇರು ಮಾರುಕಟ್ಟೆ ತೀವ್ರ ತರದಲ್ಲಿ ಹೊಯ್ದಾಡುತ್ತಿದೆ. ಸರ್ಕಾರದ ಬಲ, ಜಾಗತಿಕ ವಿದ್ಯಮಾನ ಇತ್ಯಾದಿ ನಾನಾ ಕಾರಣಗಳು ಮಾರುಕಟ್ಟೆಯನ್ನು ಪ್ರಭಾವಿಸುತ್ತಿವೆ. ನಿನ್ನೆ ಮಂಗಳವಾರ ಜಾಗತಿಕವಾಗಿ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಇದ್ದರೂ ಭಾರತದಲ್ಲಿ ಮಾತ್ರ ಹಿನ್ನಡೆ ಆಗಿದೆ. ಇವತ್ತೂ ಕೂಡ ಈ ಹೊಯ್ದಾಟ ಮುಂದುವರಿದಿದೆ.
ನಾಳೆ ಷೇರು ಮಾರುಕಟ್ಟೆಗೆ ಬಿಡುವಾಗಿದ್ದು, ಶುಕ್ರವಾರ ಮತ್ತೆ ತೆರೆಯುತ್ತದೆ. ಅದಾದ ಬಳಿಕ ಎರಡು ದಿನ ರಜೆ.