ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ವತಿಯಿಂದ ಇಪ್ಪತ್ತೊಂದನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 16 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 9.30ಕ್ಕೆ ‘ಅರಸುಸಂಕಲ ಭವನ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ’ದಲ್ಲಿ ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಜರಗಲಿದೆ.
ಈ ಸಂದರ್ಭ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಲಿದ್ದು, ನವೀಕರಣಗೊಳ್ಳಲಿರುವ ಶ್ರೀಕ್ಷೇತ್ರದ ವಿಜ್ಞಾಪನಾ ಪತ್ರವನ್ನು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾದ್ವಿ.ಶ್ರೀ ಮಾತಾನಂದಮಯೀ ಬಿಡುಗಡೆಗೊಳಿಸಿ ಆಶೀರ್ವದಿಸುವರು. ಮೀಯಪದವು ಕುಳಬೈಲಿನ ಚಂದ್ರಶೇಖರ ಜ್ಯೋತಿಷ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪೈವಳಿಕೆ ಗ್ರಾ.ಪಂ.ಸದಸ್ಯೆ ಜಯಲಕ್ಷ್ಮೀ ಭಟ್ ಧಾರ್ಮಿಕ ಭಾಷಣ ನೀಡುವರು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ ಎಂದು ಕೇತ್ರ ಪ್ರಕಟಣೆ ತಿಳಿಸಿದೆ.